ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಆಟೋಟಗಳನ್ನು ತೋರಿಸುವ ಹಲವಾರು ವಿಡಿಯೋಗಳು ಶೇರ್ ಆಗುತ್ತವೆ. ಇವುಗಳ ಪೈಕಿ ಹಲವು ವಿಡಿಯೋಗಳು ಕ್ಯೂಟ್ ಎನಿಸಿಕೊಳ್ಳುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಹೆಚ್ಚಿನ ವಿಡಿಯೋಗಳು ಬೆಕ್ಕು ಮತ್ತು ನಾಯಿಗಳನ್ನು ತೋರಿಸುತ್ತದೆ. ಅದರಲ್ಲಿಯೂ ನಾಯಿಗಳು ತಮ್ಮ ಮಾಲೀಕನನ್ನೇ ಅನುಸರಿಸುವ ಹಲವಾರು ವಿಡಿಯೋಗಳನ್ನು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಇದಾಗಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯ ಮಧ್ಯದಲ್ಲಿ ತನ್ನ ವ್ಯಾಯಾಮವನ್ನು ಪ್ರಾರಂಭಿಸಿದ ತಕ್ಷಣ, ಅವನ ಸಾಕು ನಾಯಿ ಹಿಂದುಗಡೆಯಿಂದ ಅವನನ್ನೇ ಅನುಕರಿಸುವ ವಿಡಿಯೋ ಇದಾಗಿದೆ. ಸೂರ್ಯ ನಮಸ್ಕಾರ ರೀತಿಯಲ್ಲಿ ಮಾಲೀಕ ಪೋಸ್ ನೀಡಿದಾಗ ನಾಯಿ ಕೂಡ ಹಾಗೆಯೇ ಮಾಡಿದ್ದು, ನೆಟ್ಟಿಗರು ಸೋ ಕ್ಯೂಟ್ ಎನ್ನುತ್ತಿದ್ದಾರೆ.
ಅದೇ ವಿಡಿಯೋದಲ್ಲಿ ಇನ್ನೊಂದು ಕಡೆ ನಾಯಿ ಮತ್ತು ಕೋಳಿ ಒಟ್ಟಿಗೇ ಇರುವುದನ್ನು ನೋಡಬಹುದು. ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ krishuofficial07 ಎನ್ನುವವರು ಶೇರ್ ಮಾಡಿಕೊಂಡಿದ್ದು, ಸಹಸ್ರಾರು ಮಂದಿ ಕಮೆಂಟ್ ಹಾಕಿದ್ದಾರೆ.
https://youtu.be/9H4xDpylZVA