ತೈವಾನ್ನಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದ ಗುಂಪೊಂದು ದೈತ್ಯ ಓರ್ ಫಿಶ್ಗೆ ಮುಖಾಮುಖಿಯಾಗಿದ್ದಾರೆ. ಸಮುದ್ರದ ತಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಈ ಪ್ರಬೇಧದ ಜೀವಿಯು ಭೂಕಂಪದ ಸಂಕೇತ ಎಂದು ಹೇಳಲಾಗುತ್ತೆ. ಸದ್ಯ ಈ ಅಪರೂಪದ ಘಟನೆಯು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಆದರೆ ಇಲ್ಲಿ ಆತಂಕಕ್ಕೆ ಕಾರಣವಾದ ವಿಚಾರ ಏನಂದ್ರೆ ಈ ಸಸ್ತನಿಯ ದೇಹದ ಮೇಲೆ ನಿಗೂಢ ರಂಧ್ರಗಳು ಕಾಣಿಸಿಕೊಂಡಿವೆ. ವಿಡಿಯೋದ ತುಣುಕೊಂದರಲ್ಲಿ ಓರ್ಫಿಶ್ನ್ನು ಹಿಡಿಯಲು ಡೈವ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮುಂದಾಗಿದ್ದನ್ನು ಕಾಣಬಹುದಾಗಿದೆ. ಆದರೆ ಇವರ ಸ್ಪರ್ಶಕ್ಕೆ ಮೀನು ಸಿಗೋದಿಲ್ಲ.
ತೈವಾನ್ನ ಈಶಾನ್ಯ ಕರಾವಳಿಯಲ್ಲಿ ಅನೇಕ ಅದ್ಭುತ ಜಲಚರಗಳನ್ನು ಕಾಣಬಹುದಾಗಿದೆ. ದೈತ್ಯ ಓರ್ಫಿಶ್ನೊಂದಿಗೆ ಇದು ನನ್ನ ಮೊದಲ ಮುಖಾಮುಖಿ ಎಂದು ಡೈವಿಂಗ್ ಗೈಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.