ಭಯಭೀತರಾದ ಗ್ರಾಹಕರು ತಪ್ಪು ತಿಳುವಳಿಕೆಯಿಂದಾಗಿ ಊಟವನ್ನು ಅರ್ಧಕ್ಕೆ ಬಿಟ್ಟು ಪಲಾಯನ ಮಾಡಲು ಪ್ರಾರಂಭಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶನಿವಾರ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಬ್ರೆಜಿಲ್ನ ಬಾರ್ ಮತ್ತು ರೆಸ್ಟೊರೆಂಟ್ನ ಹೊರ ಆವರಣದಲ್ಲಿ ಊಟ ಮಾಡುತ್ತಾ ಕುಳಿತಿದ್ದ ವೇಳೆ ಏಕಾಏಕಿ ಅತಂಕದ ವಾತಾವರಣ ಸೃಷ್ಟಿಯಾಗಿದ್ದನ್ನು ಕಾಣಬಹುದು.
ಒಂದು ಗುಂಪು ಗಾಬರಿಯಿಂದ ತಮ್ಮತ್ತ ಓಡಿಬರುವುದನ್ನು ಕಂಡ ಊಟ ಮಾಡುತ್ತಿದ್ದ ಗ್ರಾಹಕರು ತಾವೂ ಸಹ ಅಲ್ಲಿಂದ ಓಡಲು ಪ್ರೇರೇಪಿಸಿತು.
ತುಣುಕಿನಲ್ಲಿ, ಮಹಿಳೆಯು ಆರಂಭದಲ್ಲಿ ಪಾದಚಾರಿ ಮಾರ್ಗದ ಉದ್ದಕ್ಕೂ ರೆಸ್ಟೋರೆಂಟ್‌ನ ಹೊರಾಂಗಣದಲ್ಲಿ ಓಡುವುದನ್ನು ಕಾಣಬಹುದು. ನಂತರ ಒಬ್ಬ ವ್ಯಕ್ತಿ ತನ್ನ ನಾಯಿಯನ್ನು ಹಿಂಬಾಲಿಸುತ್ತಾನೆ, ಇದು ಇನ್ನೊಬ್ಬ ಮಹಿಳೆ ತನ್ನ ಕುರ್ಚಿಯಿಂದ ಎದ್ದು ತನ್ನ ಜೊತೆಗಿದ್ದವರೊಂದಿಗೆ ಅದೇ ರೀತಿ ಮಾಡಲು ಕಾರಣವಾಯಿತು.
ಮಹಿಳೆ ಮತ್ತು ಅವಳ ಸ್ನೇಹಿತರು ಮೇಜಿನಿಂದ ಗಾಬರಿಬಿದ್ದು ತಪ್ಪಿಸಿಕೊಳ್ಳುವುದನ್ನು ಅನುಸರಿಸಿ, ಬಾರ್ ನಲ್ಲಿದ್ದ ಇತರ ಗ್ರಾಹಕರು ತಕ್ಷಣವೇ ಅವರನ್ನು ಹಿಂಬಾಲಿಸಿದರು, ಕೆಲವರು ತಾವು ತಂದಿದ್ದ ವಸ್ತುಗಳನ್ನು ಅಲ್ಲೇ ಬಿಟ್ಟು ಹೋದರು. ಕೆಲವೇ ಸೆಕೆಂಡುಗಳಲ್ಲಿ ರೆಸ್ಟೋರೆಂಟ್ ಖಾಲಿಯಾಗಿತ್ತು.
ರೆಸ್ಟೋರೆಂಟ್ ಗೆ ವ್ಯಾಯಾಮದ ಉಡುಪು ಧರಿಸಿರುವ ಐದು ಮಂದಿಯ ಗುಂಪನ್ನು ದರೋಡೆಕೋರರೆಂದು ತಪ್ಪಾಗಿ ಭಾವಿಸಲಾಗಿದ್ದೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ.
ಹಾಜರಿದ್ದ ವೈದ್ಯ ಅಮಿರ್ ಕೆಲ್ನರ್, ಸ್ಥಳಿಯ ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ಕಳ್ಳರು ಎಂದು ತಪ್ಪಾಗಿ ಭಾವಿಸಲಾಯಿತು. ಆ ಕ್ಷಣದಲ್ಲಿ ಯಾರೋ ದರೋಡೆ ಎಂದು ಕೂಗಿದರು. ಆಗ ನಾನು ಎದ್ದು, ಅದು ದರೋಡೆಕೋರ ಎಂದು ಕೂಗಿ ಓಡಿಹೋದೆ. ಕೆಲವು ನಿಮಿಷಗಳ ನಂತರ, ಏನೂ ಆಗುತ್ತಿಲ್ಲ ಎಂದು ಗೊತ್ತಾಯಿತು. ಎಲ್ಲರೂ ನಗಲು ಪ್ರಾರಂಭಿಸಿ ಏನೂ ಆಗಿಲ್ಲ ಎಂಬಂತೆ ಟೇಬಲ್ಗಳಿಗೆ ಹಿಂತಿರುಗಿದೆವು ಎಂದು ತಿಳಿಸಿದ್ದಾರೆ.