ರಸ್ತೆಯಲ್ಲಿ ಕಾರು ಚಾಲಕ ಮತ್ತು ಡೆಲಿವರಿ ಬಾಯ್ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಪದಿಂದ ವರ್ತಿಸಿದ ಕಾರು ಚಾಲಕನಿಗೆ ಡೆಲಿವರಿ ಬಾಯ್ ತಕ್ಕ ಪಾಠ ಕಲಿಸಿದ್ದಾನೆ.
ವಿಡಿಯೋದಲ್ಲಿ ಏನಿದೆ ?
ಕಾರು ಚಾಲಕ ಮತ್ತು ಡೆಲಿವರಿ ಬಾಯ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ವಾಗ್ವಾದದಲ್ಲಿ ತೊಡಗುತ್ತಾರೆ. ಚಾಲಕ ತನ್ನ ದರ್ಪವನ್ನು ಪ್ರದರ್ಶಿಸಲು ಪ್ರಯತ್ನಿಸಿ, ಡೆಲಿವರಿ ಬಾಯ್‌ನ ಬೈಕನ್ನು ತಳ್ಳುತ್ತಾನೆ. ಇದರಿಂದ ಬೈಕ್ ನೆಲಕ್ಕೆ ಬೀಳುತ್ತದೆ.
ಕೋಪಗೊಂಡ ಡೆಲಿವರಿ ಬಾಯ್ ಚಾಲಕನ ಬಳಿಗೆ ಧಾವಿಸಿ ಹೊಡೆಯುತ್ತಾನೆ. ಕೇವಲ 12 ಸೆಕೆಂಡ್‌ಗಳಲ್ಲಿ 20 ಬಾರಿ ಬಾರಿಸಿದ್ದು, ಈ ಘಟನೆಯನ್ನು ಬೇರೊಂದು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಆಶ್ಚರ್ಯಕರವಾಗಿ, ಜನಸಂದಣಿಯಿಂದ ಅಥವಾ ಹಾದುಹೋಗುವ ಕಾರುಗಳಿಂದ ಯಾರೂ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಲಿಲ್ಲ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ
ಈ ಘಟನೆಯು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಪುಂಡನಿಗೆ ತಕ್ಕ ಉತ್ತರ ನೀಡಿದ್ದಕ್ಕಾಗಿ ಡೆಲಿವರಿ ಬಾಯ್ ಅನ್ನು ಬೆಂಬಲಿಸುತ್ತಿದ್ದಾರೆ, ಆದರೆ ಇನ್ನು ಕೆಲವರು ಹಿಂಸೆ ಎಂದಿಗೂ ಸರಿಯಾದ ಪರಿಹಾರವಲ್ಲ ಎಂದು ಹೇಳುತ್ತಿದ್ದಾರೆ.
ಒಬ್ಬ ಬಳಕೆದಾರರು, “ಅವನಂತೆ ಹೊಡೆದ ನಂತರ ಯಾರು ದರ್ಪ ತೋರಿಸುತ್ತಾರೆ?” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಅವನು ಹೆಲ್ಮೆಟ್ ಏಕೆ ತೆಗೆದನು? ಅದು ಜಗಳದಲ್ಲಿ ರಕ್ಷಣೆಗಾಗಿ ಸಹಾಯ ಮಾಡುತ್ತಿತ್ತು” ಎಂದು ಕಾಮೆಂಟ್ ಮಾಡಿದ್ದಾರೆ.
ಮೂರನೇ ವ್ಯಕ್ತಿ, “ಈ ವ್ಯಕ್ತಿ ಬೇರೆ ಲೆವೆಲ್” ಎಂದು ಹೇಳಿದ್ದಾರೆ. ಇನ್ನೊಬ್ಬರು, “ಡೆಲಿವರಿ ಬಾಯ್ ಜೊತೆ ಎಂದಿಗೂ ಜಗಳವಾಡಬೇಡಿ” ಎಂದು ಬರೆದಿದ್ದಾರೆ.
ಘಟನೆಯ ನಿಖರವಾದ ಸ್ಥಳ ಮತ್ತು ಸಮಯ ತಿಳಿದಿಲ್ಲ, ಆದರೆ ವಿಡಿಯೋವನ್ನು ಫೆಬ್ರವರಿ 8 ರಂದು ಅಪ್‌ಲೋಡ್ ಮಾಡಲಾಗಿದ್ದು, ಈಗಾಗಲೇ 260,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
Ab ye bhai kabhi koi delivery boy se panga nahi lega pic.twitter.com/DgYu5r9jck
— Vishal (@VishalMalvi_) February 6, 2025