alex Certify Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ ಬಡಿಸಿದ್ದಾರೆ ಅಲ್ಲಿನ ಸಿಬ್ಬಂದಿ.

’ಆರ್ಗನಿಕ್ ಓಯಸಿಸ್’ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಆಹಾರ ಉತ್ಪಾದಿಸಲಾಗುತ್ತದೆ. ನಗರದ ಲುಲು ಮಾಲ್‌ ಬಳಿ ಇರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಈ ರೆಸ್ಟೋರೆಂಟ್‌ ಆರಂಭಿಸಲಾಗಿದೆ.

ಮಾಜಿ ಉಪ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರೆಸ್ಟೋರೆಂಟ್ ಮ್ಯಾನೇಜರ್‌ ಶೈಲೇಂದ್ರ ಸಿಂಗ್ ಈ ಕುರಿತು ಮಾತನಾಡಿದ್ದು, “ತನ್ನದೇ ಉತ್ಪಾದನೆ, ನಿಯಂತ್ರಣ ಹಾಗೂ ಸಂಸ್ಕರಣೆ ಹೊಂದಿರುವ ಇಂಥ ಒಂದು ರೆಸ್ಟೋರೆಂಟ್ ದೇಶದಲ್ಲೇ ಮೊದಲು ಎಂದು ನಾನು ಭಾವಿಸುತ್ತೇನೆ. ಆಹಾರ ಸೇವನೆ ಮಾಡಿದ ಬಳಿಕ ಖುದ್ದು ಗ್ರಾಹಕರಿಗೆ ಅದರ ವ್ಯತ್ಯಾಸ ತಿಳಿಯಲಿದೆ,” ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...