alex Certify ಲೋಕಲ್​ ಟ್ರೇನ್​ನಲ್ಲಿ ನೂಕುನುಗ್ಗಲು: ಬಾಗಿಲು ಹಾಕಲಾಗದೇ ಪರದಾಡುತ್ತಿರುವ ಪೊಲೀಸ್; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಲ್​ ಟ್ರೇನ್​ನಲ್ಲಿ ನೂಕುನುಗ್ಗಲು: ಬಾಗಿಲು ಹಾಕಲಾಗದೇ ಪರದಾಡುತ್ತಿರುವ ಪೊಲೀಸ್; ವಿಡಿಯೋ ವೈರಲ್​

ಸಾರಿಗೆ ವ್ಯವಸ್ಥೆ ಎಷ್ಟೇ ಇದ್ದರೂ ಜನಸಂಖ್ಯೆ ಬೆಳೆದಂತೆಲ್ಲಾ ವಾಹನಗಳಲ್ಲಿ ಜನರು ತುಂಬಿ ತುಳುಕುವುದು ಮಹಾನಗರಗಳಲ್ಲಿ ಸಾಮಾನ್ಯವಾಗಿದೆ. ಕೆಲವೊಮ್ಮೆ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಪ್ರಯಾಣ ಮಾಡುವುದೂ ಇದೆ. ಅಂಥದ್ದೇ ಒಂದು ಭಯಾನಕ ವಿಡಿಯೋ ಮುಂಬೈನಿಂದ ವೈರಲ್​ ಆಗಿದೆ.

ಮುಂಬೈ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಅಗತ್ಯಕ್ಕಿಂತ ಹೆಚ್ಚು ಮಂದಿ ರೈಲಿನಲ್ಲಿ ತುಂಬಿಕೊಂಡಿರುವುದರಿಂದ ಪೊಲೀಸರು ರೈಲಿನ ಬಾಗಿಲು ಹಾಕಲು ಆಗದೇ ಹರಸಾಹಸ ಪಡುವ ವಿಡಿಯೋ ಇದಾಗಿದೆ. ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದಲ್ಲಿ ಹವಾನಿಯಂತ್ರಿತ (ಎಸಿ) ವಿಭಾಗದಲ್ಲಿಯೂ ಜನರು ತುಂಬಿ ತುಳುಕಾಡುತ್ತಿದ್ದು, ಬಾಗಿಲು ಹಾಕಲು ಸಾಹಸ ಮಾಡಬೇಕಾದ ಪರಿಸ್ಥಿತಿಯ ಕುರಿತು ವಿಡಿಯೋ ಮಾಡಲಾಗಿದೆ.

ವಿಡಿಯೋದಲ್ಲಿ ಒಬ್ಬ ಪೋಲೀಸ್ ಅಧಿಕಾರಿ ಬಾಗಿಲುಗಳನ್ನು ಮುಚ್ಚಲು ಧಾವಿಸುತ್ತಿರುವುದನ್ನು ಕಾಣಬಹುದು. ಆದರೆ ಬಾಗಿಲು ಹಾಕಲು ಸಾಧ್ಯವಾಗುವುದಿಲ್ಲ. ಇದು ಅಪಾಯಕಾರಿಯಾಗುವ ಸಾಧ್ಯತೆ ಇರುವ ಕಾರಣ ಕೆಲವೊಂದು ಪ್ರಯಾಣಿಕರನ್ನುಇಳಿಸಲು ಪೊಲೀಸ್​ ಪ್ರಯತ್ನಿಸಿದರೂ ಯಾರೂ ಇಳಿಯಲು ತಯಾರು ಇಲ್ಲದಿರುವುದನ್ನು ನೋಡಬಹುದಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಯತ್ನಗಳ ಹೊರತಾಗಿಯೂ, ಪ್ರಯಾಣಿಕರು ಮತ್ತೆ ಮತ್ತೆ ರೈಲನ್ನು ಹತ್ತುವುದನ್ನೂ ನೋಡಬಹುದು.

https://www.youtube.com/watch?time_continue=1&v=EI_af179tpQ&feature=emb_logo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...