![](https://kannadadunia.com/wp-content/uploads/2023/09/1600x960_3395648-untitled-59-copy-1024x614.jpg)
ಮಧ್ಯಪ್ರದೇಶದ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಶುಕ್ರವಾರದಂದು ತಮ್ಮ ಹುಟ್ಟುಹುಬ್ಬವನ್ನ ಅತ್ಯಂತ ವಿಶಿಷ್ಠ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ತನ್ನ ಬೆಂಬಲಿಗರು ನೀಡುವ ಸಾಂಪ್ರದಾಯಿಕ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿದ ಶಾಸಕ ಬಾಬು ಜಂಡೆಲ್ ಕುತ್ತಿಗೆಗೆ ಜೀವಂತ ಹಾವನ್ನು ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಬಾಬು ಜಂಡೇಲ್, ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತೇನೆ. ಪ್ರಾಣಿಗಳು ನನ್ನ ಸ್ನೇಹಿತರಂತೆ, ನನ್ನ ಹಿತ್ತಲಲ್ಲಿ ಇರುವ ಮಲ್ಲಿಗೆ ಗಿಡದ ಬಳಿಗೆ ರಾತ್ರಿ ಹಾವುಗಳು ಬರುತ್ತವೆ. ಹಾವುಗಳು ಶಿವನನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ನಾನು ಅದನ್ನು ನನ್ನ ಸುತ್ತಲೂ ಸುತ್ತಿಕೊಂಡಿದ್ದೇನೆ. ನನ್ನ ಜನ್ಮದಿನದ ಪ್ರಯುಕ್ತ ಭಕ್ತಿಯ ರೂಪಕವಾಗಿ ದೇವತೆಯನ್ನು ನನ್ನ ಕುತ್ತಿಗೆಯಲ್ಲಿ ಅಲಂಕರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಶಾಸಕರ ಜನ್ಮದಿನದಂದು ಶಾಸಕರ ಮನೆಯಲ್ಲಿ ಬೆಂಬಲಿಗರ ಜೊತೆಯಲ್ಲಿ ಹಾವಾಡಿಗ ಕೂಡ ಇರೋದನ್ನು ಕಾಣಬಹುದಾಗಿದೆ. ಜಾಂಡೆಲ್ ಹಾವನ್ನು ಪೆಟ್ಟಿಗೆಯಿಂದ ಹೊರತೆಗೆದು ಬಳಿಕ ಶಾಸಕರ ಕುತ್ತಿಗೆಗೆ ಹಾಕಿದ್ದಾನೆ. ಮತ್ತೊಂದು ವಿಡಿಯೋ ಕ್ಲಿಪ್ನಲ್ಲಿ, ಶಾಸಕ ಹೂವಿನ ಮಾಲೆ ಧರಿಸಲು ನಿರಾಕರಿಸುತ್ತಿರೋದನ್ನು ಕಾಣಬಹುದಾಗಿದೆ.