ಅಮೆರಿಕಾದ ಎಲ್ ಸಾಲ್ವಡಾರ್ನಲ್ಲಿರುವ ಆಂಟಿ-ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಮಾದಕ ವಸ್ತು ವಿರುದ್ಧದ ಹೋರಾಟದಲ್ಲಿ ದೊಡ್ಡ ಬೇಟೆಯಾಡಿದ್ದು, 91 ಮಿಲಿಯನ್ ಡಾಲರ್ ಅಥವಾ ಸುಮಾರು 727 ಕೋಟಿ ರೂಪಾಯಿ ಮೌಲ್ಯದ ಕೊಕೇನ್ನ ಬೃಹತ್ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಡ್ರಗ್ಸ್ 2,290 ಕಿಲೋ ಗ್ರಾಂಗಳಷ್ಟು ತೂಕವಿತ್ತು. ಡ್ರಗ್ಸ್ ವಿರುದ್ಧದ ಹೋರಾಟದ ಉದಾಹರಣೆಯನ್ನು ಜನರಿಗೆ ತಿಳಿಸಲು ಕೊಕೇನ್ನ ಸಂಪೂರ್ಣ 2,290 ಕೆಜಿ ಸರಕನ್ನು ಸುಡಲು ಅಧಿಕಾರಿಗಳು ನಿರ್ಧರಿಸಿದರು.
ಎಲ್ಲಾ ಪ್ಯಾಕೆಟ್ಗಳನ್ನು ನೆಲದ ಮೇಲೆ ಇರಿಸಿ, ಸ್ವಲ್ಪ ಗ್ಯಾಸೋಲಿನ್ ಅನ್ನು ಸುರಿದು ಬೆಂಕಿ ಹಚ್ಚಲಾಯಿತು. ಕೆಲವೇ ಕ್ಷಣಗಳಲ್ಲಿ ಕೊಕೇನ್ ಸುಟ್ಟು ಹೋಯಿತು. ವರದಿಗಳ ಪ್ರಕಾರ, ಏಳು ವಿದೇಶಿಯರಿಂದ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು.
ಸಾಲ್ವಡಾರ್ ಪೊಲೀಸರು 700 ಕೋಟಿ ಮೌಲ್ಯದ ಕೊಕೇನ್ ಸುಟ್ಟ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಿರ್ಜನ ಸ್ಥಳದಲ್ಲಿ ಅಧಿಕಾರಿಗಳು ಕೊಕೇನ್ ಪ್ಯಾಕೆಟ್ಗಳನ್ನು ನೆಲದ ಮೇಲೆ ಸುರಿಯುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.
ನಂತರ, ಅಧಿಕಾರಿಗಳು ಪ್ಯಾಕೆಟ್ಗಳ ಮೇಲೆ ಗ್ಯಾಸೋಲಿನ್ ಸಿಂಪಡಿಸುತ್ತಿರುವುದು ಕಂಡುಬರುತ್ತದೆ. ಬಳಿಕ ಬೆಂಕಿ ಇಡುತ್ತಾರೆ.
ನಾವು ಈ ರೀತಿ ಸುಡುವ ಮೂಲಕ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್ಗಳ ಹಣಕಾಸು ವ್ಯವಹಾರವನ್ನು ಹೊಡೆದು ಹಾಕಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.