Viral Photo | ಆಸ್ಟ್ರೇಲಿಯಾದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಮಿನುಗಿದ ‘ಚಂದ್ರಯಾನ 3’ ಬಾಹ್ಯಾಕಾಶ ನೌಕೆ 16-07-2023 8:40PM IST / No Comments / Posted In: Latest News, Live News, International ಸೋಶಿಯಲ್ ಮೀಡಿಯಾಗಳಲ್ಲಿ ಚಂದ್ರಯಾನ 3ಗೆ ಸಂಬಂಧಿಸಿದ ವಿಶೇಷವಾದ ಫೋಟೋವೊಂದು ವೈರಲ್ ಆಗಿದೆ. ಇದು ಆಸ್ಟ್ರೆಲಿಯಾದಲ್ಲಿ ರಾತ್ರಿ ವೇಳೆ ಕ್ಲಿಕ್ಕಿಸಿದ ಫೋಟೊವಾಗಿದೆ. ಖಗೋಳಶಾಸ್ತ್ರದ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಡೈಲನ್ ಓಡೊನೆಲ್ ಎಂಬವರು ಈ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುಟ್ಯೂಬ್ನಲ್ಲಿ ಸುಮಾರು 20 ನಿಮಿಷಗಳ ಚಂದ್ರಯಾನ 2 ನೌಕೆಯ ಉಡಾವಣೆಯನ್ನು ವೀಕ್ಷಿಸಿದ್ದ ಡೈಲನ್ ಕೊನೆಗೆ ತಮ್ಮ ಮನೆಯ ಮೇಲೆಯೇ ಹಾದು ಹೋದ ಚಂದ್ರಯಾನ 3 ಬಾಹ್ಯಾಕಾಶ ನೌಕೆಯನ್ನು ಕಣ್ತುಂಬಿಕೊಂಡಿದ್ದಾರೆ. ರಾತ್ರಿ ಗಾಢವಾಗಿದ್ದರಿಂದ ಇಷ್ಟು ಚಂದದ ದೃಶ್ಯವನ್ನು ಚಿತ್ರೀಕರಿಸುವುದು ಸುಲಭವಾಯ್ತು ಅಂತಾ ಅವರು ಬರೆದುಕೊಂಡಿದ್ದಾರೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಕಿಲೋ ಮೀಟರ್ ದೂರ ಕ್ರಮಿಸಿರುವ ಈ ನೌಕೆಯು ಮುಂದಿನ ತಿಂಗಳ ಮಧ್ಯಭಾಗದಲ್ಲಿ ಚಂದ್ರನ ಅಂಗಳವನ್ನು ತಲುಪಲಿದೆ. ಮಿಷನ್ ಚಂದ್ರಯಾನ 3 ಭವಿಷ್ಯದಲ್ಲಿ ಅಂತರ್ಗ್ರಹ ಕಾರ್ಯಾಚರಣೆಗಳಿಗೆ ನೆರವಾಗಲಿದೆ. ಚಂದ್ರಯಾನ 3 ಮಿಷನ್ ಸ್ವದೇಶಿ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿದ್ದು, ಅಂತರ-ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. Just watched India’s space agency launch their moon rocket on YT then fly over my house 30 mins later! Congrats @isro ! Hopefully you stick the landing 💪🏼 pic.twitter.com/ETP8xL8lqv — Dylan O'Donnell (@erfmufn) July 14, 2023