ಇತ್ತೀಚೆಗೆ ನರ್ತಕಿಯೊಬ್ಬಳು ಧರಿಸಿದ್ದ ಬಟ್ಟೆಯ ಬಣ್ಣ ಯಾವುದು ಅಂತಾ ನೆಟ್ಟಿಗರು ತುಂಬಾ ತಲೆಕೆಡಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಎಫೆಕ್ಟ್ ಕಲಾವಿದರಾದ ಕ್ಲೈನ್ ಎಂಬುವವರು ವಿಡಿಯೋ ಅಪ್ಲೋಡ್ ಮಾಡಿ, ನರ್ತಕಿ ಧರಿಸಿರುವ ಬಟ್ಟೆಯ ನಿಜವಾದ ಬಣ್ಣ ಯಾವುದೆಂದು ಹೇಳಬಲ್ಲಿರಾ ಅಂತಾ ಸವಾಲು ಹಾಕಿದ್ದರು.
ಟ್ರೆಂಡಿಂಗ್ ಇನ್‌ಸ್ಟಾಗ್ರಾಮ್ ರೀಲ್‌ಗಳ ಸೌಂಡ್‌ಟ್ರ್ಯಾಕ್ ನ್ಯೂಸ್ಟ್ರಾ ಕ್ಯಾನ್ಸಿಯಾನ್‌ಗೆ ಕ್ಲೈನ್ ನೃತ್ಯ ಮಾಡಿದ್ದಾರೆ. ನೃತ್ಯ ಮಾಡಲು ಪ್ರಾರಂಭಿಸಿದಾಗ ಆಕೆ ಧರಿಸಿದ್ದ ಬಟ್ಟೆಯ ಬಣ್ಣವು ಕ್ರಮೇಣ ಹಸಿರು, ನೇರಳೆ, ಗುಲಾಬಿ, ನೀಲಿ ಹೀಗೆ ಬಣ್ಣ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಬಟ್ಟೆಯ ನಿಜವಾದ ಬಣ್ಣ ಯಾವುದೆಂದು ಊಹಿಸಬಲ್ಲಿರಾ ಅಂತಾ ಕ್ಲೈನ್ ಸಾಮಾಜಿಕ ಜಾಲತಾಣದಲ್ಲಿ ಸವಾಲು ಹಾಕಿದ್ದರು.
ನೆಟ್ಟಿಗರು ಉಡುಪಿನ ನಿಜವಾದ ವರ್ಣವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಹೆಚ್ಚಿನ ಜನರು ತಪ್ಪಾದ ಬಣ್ಣವನ್ನು ಆಯ್ಕೆ ಮಾಡಿದ್ದಾರೆ. ವಿಡಿಯೊಗೆ ಸಿಜಿಐI ಪರಿಣಾಮ ಸೇರಿಸಲು ಹಸಿರು ಪರದೆಯನ್ನು ಬಳಸುವುದರಿಂದ ನಿಜವಾದ ಬಣ್ಣ ಹಸಿರು ಅಂತಾ ಅನೇಕರು ಊಹೆ ಮಾಡಿದ್ದರು.
ಇನ್ನು ಕೆಲವರು ಉಡುಪಿನ ನಿಜವಾದ ಬಣ್ಣ ನೇರಳೆ ಎಂದು ಹೇಳಿದ್ದಾರೆ. ಎಲ್ಲಾ ಬಣ್ಣಗಳು ಬಟ್ಟೆಯ ಅಂಚಿನ ಸುತ್ತಲೂ ನೇರಳೆ ಪ್ರಭಾ ವಲಯವನ್ನು ಸ್ವಲ್ಪ ಹೆಚ್ಚು ಹೊಂದಿದೆ. ಹೀಗಾಗಿ ನೇರಳೆ ಬಣ್ಣ ಅಂತಾ ಬಳಕೆದಾರ ಹೇಳಿದ್ದಾರೆ.
ಬಳಿಕ ಕ್ಲೈನ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಉತ್ತರ ತಿಳಿಯಲು ವಿಡಿಯೋ ಸಂಪೂರ್ಣವಾಗಿ ನೋಡಿ ಎಂದು ಶೀರ್ಷಿಕೆ ನೀಡಿದ್ದಾರೆ. ಅಂತಿಮವಾಗಿ ಕ್ಲೈನ್ ಧರಿಸಿದ್ದ ಉಡುಪಿನ ನಿಜವಾದ ಬಣ್ಣ ನೇರಳೆಯಾಗಿತ್ತು.
ನವೆಂಬರ್ 9 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವೈರಲ್ ವಿಡಿಯೋವನ್ನು 11.4 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://youtu.be/uEyzCxb3wK0
https://www.youtube.com/watch?v=vT89x2MLHFQ