ದೇಶದ ಪ್ರಜೆಗಳು ಆರಾಮವಾಗಿ ತಮ್ಮ ದಿಂಬುಗಳಿಗೆ ತಲೆಯೊಡ್ಡಿ ನಿದ್ರೆ ಮಾಡುತ್ತಾರೆಂದರೆ ಅದಕ್ಕೆ ನಿದ್ರೆ ತ್ಯಜಿಸಿ ದೇಶದ ಗಡಿಗಳನ್ನು ಕಾಯುವ ಯೋಧರು ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಗಡಿಗಳ ಮುಂಚೂಣಿ ಪೋಸ್ಟ್‌ಗಳಲ್ಲಿ ಸೇನೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಏನೆಲ್ಲಾ ರೀತಿಯ ಹವಾಮಾನ ವೈಪರೀತ್ಯಗಳನ್ನು ಎದುರಿಸಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಅನೇಕ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ.
ದೇಶವನ್ನು ಕಾಯಲು ಶತ್ರುಗಳ ವಿರುದ್ಧದ ಹೋರಾಟಕ್ಕಿಂತಲೂ ಹೆಚ್ಚಾಗಿ ನಮ್ಮ ಯೋಧರು ಹವಾಮಾನ ವೈಪರಿತ್ಯಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ.
ಬಿಎಸ್‌ಎಫ್ ಕಾಶ್ಮೀರ ಟ್ವಿಟರ್‌ನಲ್ಲಿ ಈ ಸಂಬಂಧ ವಿಡಿಯೋವೊಂದನ್ನು ಶೇರ್ ಮಾಡಿದ್ದು, “ಗೆಲುವಿನ ಸಾಗರವೆಂಬುದು ತನ್ನೊಡಲಲ್ಲಿ ಅನನ್ಯ ಸವಾಲುಗಳನ್ನೇ ಒಳಗೊಂಡಿದೆ. ಆದರೆ ನನಗೆ ಆ ವಿಜಯವನ್ನು ಪಡೆಯುವ ಹುಮ್ಮಸ್ಸಿದೆ. ಕಾಶ್ಮೀರ ಗಡಿ. ಗಡಿ ಭದ್ರತಾ ಪಡೆ – ಸದಾ ಜಾಗರೂಕ,” ಎಂದು ಪೋಸ್ಟ್ ಮಾಡಿದೆ.
ಮೈಸನ್ ಡಿಗ್ರಿಗಳಷ್ಟು ಕೊರೆಯುವ ತಾಪಮಾನದಲ್ಲಿ, ಹಿಮಗಲ್ಲುಗಳ ಮೇಲೆ ವಿಶೇಷ ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುವ ಬಿಎಸ್‌ಎಫ್ ಯೋಧನ ದೈನಂದಿನ ಬದುಕನ್ನು ಈ 11 ಸೆಕೆಂಡ್‌ಗಳ ವಿಡಿಯೋ ನಮ್ಮ ಕಣ್ಣಿಗೆ ಕಟ್ಟಿಕೊಡುತ್ತಿದೆ.
ಈ ಟ್ವೀಟ್ ಕಂಡ ಅನೇಕ ನೆಟ್ಟಿಗರು ಯೋಧರಿಗೆ ತಮ್ಮ ಗೌರವ ನಮನಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಕೊಡುವ ಮೂಲಕ ಅವರ ತ್ಯಾಗಗಳನ್ನು ಸ್ಮರಿಸಿದ್ದಾರೆ.
https://twitter.com/Oreezzz/status/1638889754509946882?ref_src=twsrc%5Etfw%7Ctwcamp%5Etweetembed%7Ctwterm%5E1638889754509946882%7Ctwgr%5E43b040d984d997b14e87f404614a24bda6d8bb25%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-bsf-jawan-battles-freezing-weather-at-kashmir-border-7374955.html