
ಆರಂಭದಲ್ಲೇ ಹೇಳುವುದಾದರೆ ಇದು ರಾಜಕೀಯಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಕೇರಳದಲ್ಲಿ ಬಿಜೆಪಿ ಅರಳಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಆದರೂ ಸಾಧ್ಯವಾಗುತ್ತಿಲ್ಲ.
ಬಿಜೆಪಿಯ ಕಮಲ ಅಲ್ಲಿ ಅರಳದಿರಬಹುದು, ಆದರೆ ಅಲ್ಲಿನ ಕೆರೆಯೊಂದು ಸಂರ್ಪೂಣ ಕಮಲದಿಂದ ಆವೃತವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ.
ಅನೇಕ ಡ್ರೋನ್ ಶಾಟ್ಗಳು ಜಾಲತಾಣದಲ್ಲಿ ಕಾಣಿಸಿಕೊಂಡು ಉಸಿರು ಬಿಗಿಹಿಡಿಯುವಂತೆ ಮಾಡುತ್ತದೆ. ಈಗ ಮತ್ತೊಂದು ಡ್ರೋನ್ ಶಾಟ್ ಇಂತಹದ್ದೇ ಭಾವನೆ ಸೃಷ್ಟಿಸಲಿದೆ. ಈ ವೈರಲ್ ಕ್ಲಿಪ್ ಕಮಲದ ಹೂವುಗಳಿಂದ ಆವೃತವಾದ 360 ಡಿಗ್ರಿ ನೋಟವನ್ನು ತೋರಿಸುತ್ತದೆ. ಸರೋವರದ ಭವ್ಯವಾದ ನೋಟವು ಸರೋವರದಲ್ಲಿ ಒಬ್ಬ ವ್ಯಕ್ತಿಯು ತನ್ನ ಸಾಂಪ್ರದಾಯಿಕ ದೋಣಿಯನ್ನು ಓಡಿಸುವುದು ಸಹ ಕಾಣಿಸುತ್ತದೆ.
ಸ್ಪಷ್ಟವಾದ ಆಕಾಶ ಮತ್ತು ತಾಜಾ ಗಾಳಿ. ನಾನು ಅದನ್ನು ಆನಂದಿಸಲು ಬಯಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಅನೇಕರು ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ.