ಮೆಟ್ಟೂರು : ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನ ಬಳಿ ಕಾವೇರಿ ನದಿಯ ಮಧ್ಯದಲ್ಲಿ ಸಿಲುಕಿದ್ದ ಏಳು ನಾಯಿಗಳ ಗುಂಪಿಗೆ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ ಶುಕ್ರವಾರ ಡ್ರೋನ್ ಮೂಲಕ ಬಿರಿಯಾನಿ ನೀಡಿದರು.
ಮೂರು ದಿನಗಳಿಂದ ಆಹಾರವಿಲ್ಲದೆ ಬಳಲುತ್ತಿದ್ದ ನಾಯಿಗಳನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಗಾಗಿ 30 ಕೆಜಿ ಸಾಗಿಸುವ ಸಾಮರ್ಥ್ಯದ ಮತ್ತೊಂದು ಡ್ರೋನ್ ಆಗಮನಕ್ಕಾಗಿ ರಕ್ಷಣಾ ಸಿಬ್ಬಂದಿ ಕಾಯುತ್ತಿದ್ದಾರೆ. ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಡ್ರೋನ್ ಸೇವೆಗಳಲ್ಲಿ ಪರಿಣತಿ ಹೊಂದಿರುವ ಜಿಯೋಟೆಕ್ನೋವಾಲಿ ಎಂಬ ಕಂಪನಿಯ ಸಹಾಯವನ್ನು ಪಡೆದಿದ್ದಾರೆ.
ಅಣೆಕಟ್ಟಿನ 16-ಕಾಲುವೆಗಳ ಗೇಟುಗಳಿಂದ ನೀರು ಹರಿಯುವ ಡ್ರೋನ್ ವೀಡಿಯೊ ಗುರುವಾರ ವೈರಲ್ ಆದ ನಂತರ ಸಿಕ್ಕಿಬಿದ್ದ ನಾಯಿಗಳ ದುಃಸ್ಥಿತಿ ಬೆಳಕಿಗೆ ಬಂದಿದೆ. ಹಸಿವಿನಿಂದ ಕಂಗೆಟ್ಟ ನಾಯಿಗಳಿಗೆ ಬಿರಿಯಾನಿ ನೀಡಿದ ರಕ್ಷಣಾ ಸಿಬ್ಬಂದಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.