ಸಮಯಪ್ರಜ್ಞೆ, ಮನಸ್ಸಿನ ಮೇಲೆ ಹಿಡಿತ, ಒಂದಿಷ್ಟು ಧೈರ್ಯವಿದ್ದರೆ ಎಂತಹ ಸಂಕಷ್ಟ, ಬಿಕ್ಕಟ್ಟಿನ ಸಂದರ್ಭದಲ್ಲೂ ಪಾರಾಗಬಹುದು, ಜೀವವನ್ನೇ ಉಳಿಸಿಕೊಳ್ಳಬಹುದು ಎಂಬುದಕ್ಕೆ ಮಲೇಷ್ಯಾದ ವ್ಯಕ್ತಿಯೊಬ್ಬ ನಿದರ್ಶನವಾಗಿ ಸಿಕ್ಕಿದ್ದಾನೆ. ಸಮಯಪ್ರಜ್ಞೆಯಿಂದಾಗಿ ಕೆಲವೇ ಸೆಕೆಂಡುಗಳಲ್ಲಿ ರಸ್ತೆ ಅಪಘಾತದಿಂದ ಹಾರಿಹೋಗಲಿದ್ದ ಪ್ರಾಣಪಕ್ಷಿಯನ್ನು ಉಳಿಸಿಕೊಂಡಿದ್ದಾನೆ.
ಮಲೇಷ್ಯಾದಲ್ಲಿ ವ್ಯಕ್ತಿಯೊಬ್ಬ ಬೈಕ್ ಮೇಲೆ ತೆರಳುತ್ತಿರುವಾಗ ಏಕಾಏಕಿ ಸಮತೋಲನ ತಪ್ಪಿ ಬೈಕ್ ಜಾರಿದ ಕಾರಣ ಬಿದ್ದಿದ್ದಾನೆ. ಅದು ಹೆದ್ದಾರಿಯಾದ ಹಲವು ವಾಹನಗಳು, ಅದರಲ್ಲೂ ಟ್ರಕ್, ಲಾರಿಗಳು ಸಂಚರಿಸುತ್ತವೆ ಎಂಬುದನ್ನು ಮನಗಂಡಿದ್ದ ಯುವಕ ಬಿದ್ದ ಕೂಡಲೇ ವೇಗವಾಗಿ ಎದ್ದು ಪಕ್ಕಕ್ಕೆ ಓಡಿದ್ದಾನೆ. ಆತ ಓಡುವುದು ಒಂದು ಕ್ಷಣ ಸಹ ವಿಳಂಬವಾಗಿದ್ದರೂ ಅವನ ಮೇಲೆ ದೊಡ್ಡ ಲಾರಿಯೊಂದು ಹೋಗಿ, ಆತ ಅಪ್ಪಚ್ಚಿಯಾಗುತ್ತಿದ್ದ. ಆದರೆ, ಬಿದ್ದ ಕೂಡಲೇ ಓಡಿಹೋದ ಕಾರಣ ಹಿಂದಿನಿಂದ ಬಂದ ಲಾರಿಯು ಗುದ್ದುವುದರಿಂದ ತಪ್ಪಿದೆ.
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 14 ವರ್ಷದ ಬಾಲಕನನ್ನು ಬಂಧಿಸಿದ ದೆಹಲಿ ಪೊಲೀಸರು….!
ವ್ಯಕ್ತಿಯು ಚಾಣಾಕ್ಷತನದಿಂದ ಪ್ರಾಣ ಉಳಿಸಿಕೊಂಡ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲು ವೈರಲ್ ಹಾಗ್ ಎಂಬ ಖಾತೆಯಿಂದ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬಳಿಕ ಎಲ್ಲೆಡೆ ಶೇರ್ ಆಗಿದೆ. ಭಾರಿ ಮಳೆ ಬರುತ್ತಿದ್ದ ಕಾರಣ ಆತನ ಬೈಕ್ ಜಾರಿ ಬಿದ್ದಿದೆ ಎನ್ನಲಾಗಿದೆ. ಹೀಗೆ, ಜಾರಿ ಬಿದ್ದರೂ ಸೆಕೆಂಡುಗಳ ಅಂತರದಲ್ಲಿ ಸ್ಥಿತಪ್ರಜ್ಞೆಯಿಂದ ಆತ ಪ್ರಾಣ ಉಳಿಸಿಕೊಂಡಿರುವ ಕುರಿತು ಜನ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿ ರಸ್ತೆ ಅಪಘಾತಗಳು ನಿತ್ಯ ಸಂಭವಿಸುತ್ತವೆ. ನೂರು, ಸಾವಿರಾರು ಜನ ಅಪಘಾತದಲ್ಲಿ ಮೃತಪಡುತ್ತಾರೆ. ಅದರಲ್ಲೂ, ಮಲೇಷ್ಯಾವು ಜಗತ್ತಿನಲ್ಲೇ ಅತಿ ಹೆಚ್ಚು ಜನ ರಸ್ತೆ ಅಪಘಾತದಲ್ಲಿ ಮೃತಪಡುವ ರಾಷ್ಟ್ರ ಎಂಬ ಕುಖ್ಯಾತಿ ಪಡೆದಿದೆ. ರಸ್ತೆಗಳ ಕಳಪೆ ಗುಣಮಟ್ಟವೂ ಆ ರಾಷ್ಟ್ರದಲ್ಲಿ ಅಪಘಾತ ಹೆಚ್ಚಾಗಲು ಕಾರಣ ಎನ್ನಲಾಗಿದೆ.