ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು.
ಇಂಥದ್ದೇ ಮತ್ತೊಂದು ಕಾಂಬಿನೇಷನ್ ಒಂದು ಬಾಂಗ್ಲಾದೇಶದ ಬೀದಿ ಬದಿ ವ್ಯಾಪಾರಿಯೊಬ್ಬರಿಂದ ಸೃಷ್ಟಿಯಾಗಿದೆ.
ʼಸ್ಮಾರ್ಟ್ʼ ಫೋನ್ ಗಿಂತ ಮೊದಲು ಬಳಕೆಯಲ್ಲಿತ್ತು ‘ಸೆಲ್’ ಪದ…! ಇದರ ಹಿಂದಿತ್ತು ಈ ಕಾರಣ
ಇನ್ಸ್ಟಾಗ್ರಾಂನಲ್ಲಿ ’ಅವರ್ ಕಲೆಕ್ಷನ್’ ಹೆಸರಿನ ಪೇಜ್ ಒಂದರಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಸ್ಟ್ರಾಬೆರ‍್ರಿ ತುಂಡುಗಳನ್ನು ಸಣ್ಣದಾಗಿ ಕತ್ತರಿಸಿ, ಅವುಗಳನ್ನು ಜಾರ್ ಒಂದರಲ್ಲಿ ಹಾಕಿ ಉಪ್ಪು ಹಾಗೂ ಮಸಾಲೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.
ಇದಾದ ಬಳಿಕ ಜಾರಿನ ಮುಚ್ಚಳ ಹಾಕಿ, ಅದನ್ನು ಚೆನ್ನಾಗಿ ಅಲ್ಲಾಡಿಸಿ, ಸ್ಟ್ರಾಬೆರ‍್ರಿ ತುಂಡುಗಳಿಗೆ ಮಸಾಲೆ ಹಿಡಿಸಿ ಗಿರಾಕಿಗಳಿಗೆ ನೀಡುತ್ತಿದ್ದಾರೆ ಈ ವರ್ತಕ.
ಸ್ಟ್ರಾಬೆರ‍್ರಿ ಮಸಾಲೆಯ ಈ ವಿಶಿಷ್ಟ ವಿಡಿಯೋಗೆ 6.6 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ.
https://www.youtube.com/watch?v=JMLzbWlqS1o&feature=youtu.be