
ಜನರಿಗೆ ಖುಷಿ ಹಂಚುವ ಕೆಲಸ ಇದೆಯಲ್ಲ? ಅದರಂಥ ಸಂತಸ ನೀಡುವ ಕಾಯಕ ಮತ್ತೊಂದಿಲ್ಲ.
ಸೋಹನ್ ವಿಕೆ ಹೆಸರಿನ ಕಲಾವಿದರೊಬ್ಬರು ತಮ್ಮ ಪ್ರದೇಶದ ಐಸ್‌ಕ್ರೀಂ ಶಾಪ್ ಒಂದರ ಸಿಬ್ಬಂದಿಯೊಬ್ಬರ ಇಂಕ್ ಸ್ಕೆಚ್ ಬಿಡಿಸುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ತನ್ನದೇ ಸ್ಕೆಚ್‌ಅನ್ನು ಪಡೆದ ಐಸ್‌ಕ್ರೀಂ ವರ್ತಕ ಮೊದಲಿಗೆ ಅದು ಯಾರೆಂದು ತಿಳಿಸಲು ಯತ್ನಿಸುತ್ತಾನೆ. ಬಳಿಕ ಅದು ತನ್ನದೇ ಎಂದು ತಿಳಿದಾಗ ಆತನ ಮೊಗದಲ್ಲಿ ಮೂಡುವ ಮಂದಹಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
“ಮೆಲ್ಟಿಂಗ್ ಮೊಮೆಂಟ್ಸ್,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
https://youtu.be/-gAaAmorJRM