ನಾಯಿ, ಬೆಕ್ಕು, ಆನೆ, ಕುದುರೆ, ಕೋತಿಗಳು ಮನುಷ್ಯನ ಜೊತೆ ಸಹಜವಾಗಿ ಬೆರೆತು ಗೆಳೆತನ ಬೆಳೆಸಿಕೊಳ್ಳುವ ಜೀವಿಗಳು. ಆದರೆ ಯಾವತ್ತಾದ್ರೂ ಪಕ್ಷಿಗಳು ಕೂಡ ಮನುಷ್ಯನ ಜೊತೆ ಗೆಳೆತನ ಮಾಡಿಕೊಳ್ಳುವುದನ್ನ ನೋಡಿದ್ದಿರಾ? ಅಮೇಥಿಯ ಆರೀಫ್ ಮತ್ತು ಮತ್ತು ಸಾರಸ್ ಕ್ರೇನ್ ಪಕ್ಷಿಯ ನಿಷ್ಕಲ್ಮಶ ಗೆಳೆತನ ನೋಡಿ ಜನರು ಅಚ್ಚರಿಗೊಳಗಾಗಿದ್ದರು.
ಈಗ ಯುಪಿಯ ’ಮೌ’ ಅನ್ನುವ ಹೆಸರಿನ ಪುಟ್ಟ ಗ್ರಾಮದಲ್ಲಿ, ರಾಮಾನುಜನ್ ಮತ್ತು ಸಾರಸ್ ಕ್ರೇನ್ ಪಕ್ಷಿಯ ಗೆಳೆತನದ ವಿಡಿಯೋ ಈಗ ವೈರಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯುತ್ತಿದೆ.
ಒಂದು ದಿನ ರಾಮಾನುಜ್ ತಮ್ಮ ಹೊಲಕ್ಕೆ ಹೋಗಿದ್ದಾಗ ಈ ಪಕ್ಷಿ ಅಲ್ಲಿ ಆಹಾರ ಅರಸಿಕೊಂಡು ಬಂದಿರುವುದನ್ನ ಗಮನಿಸಿದ್ದಾರೆ. ಆಗ ರಾಮಾನುಜ್ ಈ ಪಕ್ಷಿಗೆ ಆಹಾರವನ್ನ ನೀಡಿದ್ದಾರೆ. ಅಂದಿನಿಂದ ಈ ಪಕ್ಷಿ ರಾಮಾನುಜ್ ಅವರನ್ನ ಹುಡುಕಿಕೊಂಡು ದಿನವೂ ಬರುತ್ತಿದೆ. ಅಂದಿನಿಂದ ಶುರುವಾದ ಇವರಿಬ್ಬರ ಗೆಳೆತನ ಇಂದಿಗೂ ಮುಂದುವರೆದುಕೊಂಡು ಹೋಗುತ್ತಿದೆ.
ರಾಮಾನುಜ್ ಮತ್ತು ಸರಸ್ ಕ್ರೇನ್ ಪಕ್ಷಿಯ ವಿಡಿಯೋ ಈಗ ವೈರಲ್ ಆಗಿದ್ದು ಇವರಿಬ್ಬರೂ ಇಲ್ಲಿ ಆಟ ಆಡುತ್ತಿರುವುದನ್ನ ಗಮನಿಸಬಹುದು. ಆತ ಎಲ್ಲೆಲ್ಲಿ ಹೋಗುತ್ತಾನೋ ಈ ಪಕ್ಷಿಯೂ ಅಲ್ಲಲ್ಲಿ ಯಾವುದೇ ಭಯವಿಲ್ಲದೇ ಓಡೋಡಿ ಹೋಗುವುದನ್ನ ಗಮನಿಸಬಹುದು.
ಆರೀಫ್ ಮತ್ತು ಸರಸ್ ಕ್ರೇನ್ ಪಕ್ಷಿಯ ಗೆಳೆತನ ಸಹ ನೆಟ್ಟಿಗರ ಹೃದಯ ಗೆದ್ದಿತ್ತು. ಆರೀಫ್ ಗಾಯಗೊಂಡಿದ್ದ ಸಾರಸ್ ಕ್ರೇನ್ ಪಕ್ಷಿಯನ್ನ ಕಾಪಾಡಿದ್ದಕ್ಕಾಗಿ ಆರೀಫ್‌ನನ್ನ ಕ್ಷಣವೂ ಬಿಟ್ಟಿರಲಾಗದಷ್ಟು, ಆ ಪಕ್ಷಿ ಹಚ್ಚಿಕೊಂಡಿತ್ತು. ಅರಣ್ಯ ಅಧಿಕಾರಿಗಳು ಬಂದು ಸಾರಸ್ ಕ್ರೇನ್‌ನನ್ನ ತಮ್ಮ ವಶಕ್ಕೆ ಪಡೆದು ಕರೆದುಕೊಂಡು ಹೋಗುವಾಗ ಅದರ ನೋವು ಅಷ್ಟಿಷ್ಟಲ್ಲ.
ಸ್ವಾರ್ಥ ಮನಸ್ಸಿನಿಂದ ಪ್ರೀತಿಸೋ ನಾಟಕ ಆಡಿ, ಮೋಸ ಮಾಡುವವರ ನಡುವೆ ಈ ರೀತಿ ನಿಷ್ಕಲ್ಮಶದ ಪ್ರೀತಿಯನ್ನ ನೋಡಿ ನೆಟ್ಟಿಗರು ಫೀದಾ ಆಗ್ಹೋಗಿದ್ದಾರೆ.