ರಿಲಾಯನ್ಸ್ ಸಮೂಹದ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಯನ್ನು ಮಾರ್ಚ್ 31ರಂದು ಮುಂಬಯಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಾಲಿವುಡ್‌ನ ದಿಗ್ಗಜರೆಲ್ಲಾ ನೆರೆದಿದ್ದರು.
ಈ ಸಂದರ್ಭದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮೇಲೆ ಕ್ಯಾಮೆರಾ ಲೆನ್ಸ್‌ಗಳ ವಿಶೇಷ ದೃಷ್ಟಿ ಬಿದ್ದಿತ್ತು. ಮ್ಯಾಚಿಂಗ್ ಗೆಟಪ್‌ನಲ್ಲಿ ಕಾಣಿಸಿಕೊಂಡ ನವದಂಪತಿಗಳು, ನೆಟ್ಟಿಗ ಜೋಡಿಗಳಿಗೆ ಕಪಲ್ ಗೋಲ್‌ಗಳನ್ನು ಸೃಷ್ಟಿಸಿದ್ದಾರೆ.
ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಕಪ್ಪು ಸೀರೆಯಲ್ಲಿ ಮಿಂಚುತ್ತಿದ್ದ ರಾಧಿಕಾ ಮರ್ಚೆಂಟ್ ಜೊತೆಗೆ ಬಂಧ್ಗಾಲಾ ಶೇರ್ವಾನಿಯಲ್ಲಿ ಬಂದಿದ್ದ ಅನಂತ್ ಅಂಬಾನಿಯ ಫೋಟೋಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.
ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿರ ಕಿರಿಯ ಪುತ್ರನಾದ ಅನಂತ್ ಅಂಬಾನಿ ಇದೇ ಜನವರಿಯಲ್ಲಿ ರಾಧಿಕಾ ಮರ್ಚೆಂಟ್‌ರನ್ನು ವರಿಸಿದ್ದಾರೆ. ಮುಂಬಯಿಯಲ್ಲಿರುವ ಅಂಬಾನಿ ನಿವಾಸ ಆಂಟಿಲಾದಲ್ಲಿ ಈ ಮದುವೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.