ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿದೆ. ಹಾಗೆಯೇ ನಾವು ನಮ್ಮ ಮಕ್ಕಳನ್ನು ಎಷ್ಟು ಶಕ್ತಿವಂತರಾಗಿ, ಸ್ವಾಭಿಮಾನಿಗಳಾಗಿ ಬೆಳೆಸುತ್ತೇವೆಯೋ ಮುಂದೆ ದೊಡ್ಡವರಾದಾಗ ಅವರು ಅಂಥ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಅಲ್ಲದೆ ಮಕ್ಕಳಲ್ಲಿ ಎಲ್ಲಾ ವಿಷಯದ ಬಗ್ಗೆಯೂ ಆತ್ಮವಿಶ್ವಾಸ ತುಂಬಬೇಕು. ತನ್ನಿಂದ ಎಂಥ ಕಠಿಣ ಕೆಲಸವು ಮಾಡಲಾಗುತ್ತದೆ ಎಂಬ ಅರಿವು ಮಗುವಿಗೆ ಮೂಡಿದ್ರೆ, ಮುಂದೆ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ.
ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿದ್ದಾರೆ ಎಂಬ ಬಗ್ಗೆ ಬಹುಶಃ ನಿಮಗೆ ತಿಳಿದಿರಬಹುದು. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ, ಖಂಡಿತ ನಿಮಗೂ ಸ್ಪೂರ್ತಿಯಾಗಬಲ್ಲುದು. ಕೆಸರುಮಯ ರಸ್ತೆಯಲ್ಲಿ ಸಿಲುಕಿದ್ದ ಜೆಸಿಬಿಯನ್ನು ಚಿಕ್ಕ ಬಾಲಕನೊಬ್ಬ ತನ್ನ ಪುಟ್ಟ ಆಟಿಕೆ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಅದರಿಂದ ಎಳೆದಿರುವ ವಿಡಿಯೋವನ್ನು ಉದ್ಯಮಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.
ರ‍್ಯಾಪರ್ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ
ವಿಡಿಯೋ ಹಂಚಿಕೊಂಡ ಬಳಿಕ ಮಹೀಂದ್ರಾ, ನಿಮ್ಮ ಮಗುವಿನ ಆತ್ಮ ವಿಶ್ವಾಸವನ್ನು ನಿರ್ಮಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆದರೆ, ನಿಮ್ಮಲ್ಲಿ ಯಾರಾದರೂ ನಮ್ಮ ಆಟಿಕೆ ಮಹೀಂದ್ರಾ ಟ್ರಾಕ್ಟರ್‌ನೊಂದಿಗೆ ಇದನ್ನು ಪ್ರಯತ್ನಿಸಿದ್ರೆ, ದಯವಿಟ್ಟು ಈ ಪೋಷಕರಂತೆ ಜಾಗರೂಕರಾಗಿರಲು ಮರೆಯದಿರಿ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
ಡಿಸೆಂಬರ್ 12 ರಂದು ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಾಲಕನ ಮನೋಸ್ಥೈರ್ಯಕ್ಕೆ ನೆಟ್ಟಿಗರು ಸಲಾಂ ಎಂದಿದ್ದಾರೆ.