ಮಲಪ್ಪುರಂ (ಕೇರಳ): ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾಹಿದೆ. ಆದರೆ ರೈಲನ್ನು ಹತ್ತುವಾಗ ಕೊನೆಯ ಕ್ಷಣದಲ್ಲಿ ಓಡಿಬಂದು ರೈಲು ಹತ್ತುವಾಗ ಹಲವಾರು ರೀತಿಯಲ್ಲಿ ಅಪಘಾತಗಳು ಆಗುತ್ತಿರುವ ಬಗ್ಗೆ ಆಗಾಗ್ಗ ಸುದ್ದಿಯಾಗುತ್ತಲೇ ಇರುತ್ತವೆ. ಎಷ್ಟೋ ಸಮಯದಲ್ಲಿ ಅದೃಷ್ಟ ನೆಟ್ಟಗಿದ್ದರೆ ಯಾರಾದರೂ ಬಂದು ಅವರನ್ನು ಬಚಾವ್ ಮಾಡುತ್ತಾರೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಗಡಿಬಿಡಿಯಲ್ಲಿ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಬಿದ್ದ ಬಾಲಕಿಯೊಬ್ಬಳನ್ನು ರೈಲ್ವೇ ಸಂರಕ್ಷಣಾ ಪಡೆಯ ಸಿಬ್ಬಂದಿ ಉಳಿಸಿರುವ ಘಟನೆ ಇದಾಗಿದೆ. ಬಾಲಕಿಯೊಬ್ಬಳು ರೈಲು ಚಲಿಸುತ್ತಿರುವಾಗ ಹತ್ತಲು ಪ್ರಯತ್ನಿಸಿದಳು. ಆದರೆ ಆಕೆ ಆಯತಪ್ಪಿ ಬಿದ್ದುಬಿಟ್ಟಳು.
ತಕ್ಷಣವೇ ಅಲ್ಲಿದ್ದ ಸಿಬ್ಬಂದಿ ಇದನ್ನು ನೋಡಿ ಬಾಲಕಿಯನ್ನು ಎಳೆದಿದ್ದಾನೆ. ಇದರಿಂದ ಆಕೆ ರೈಲಿನ ಅಡಿ ಆಡುವುದು ತಪ್ಪಿದೆ. ಈ ವಿಡಿಯೋವನ್ನು ಆರ್‌ಪಿಎಫ್ ಇಂಡಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ರೀತಿ ತೊಂದರೆಗೆ ಸಿಲುಕಬೇಡಿ ಎಂದು ಪದೇ ಪದೇ ಹೇಳುತ್ತಿದ್ದರೂ ಪ್ರಯಾಣಿಕರು ಇದನ್ನು ಗಮನಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ ರೈಲ್ವೆ ನಿಲ್ದಾಣದಲ್ಲಿ. ಆರ್‌ಪಿಎಫ್ ಹೆಡ್ ಕಾನ್‌ಸ್ಟೆಬಲ್ ಸತೀಶ್ ಅವರು ಬಾಲಕಿಯ ಜೀವ ಕಾಪಾಡಿದವರು.