ನೀವು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ಜನಪ್ರಿಯ ಕಂಟೆಂಟ್ ರಚನೆಕಾರರಾದ ತಾಂಜಾನಿಯಾದ ಒಡಹುಟ್ಟಿದವರ ಬಗ್ಗೆ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಶೇರ್ಷಾ ಚಲನಚಿತ್ರದ ಜನಪ್ರಿಯ ಹಿಂದಿ ಹಾಡು ರಾತನ್ ಲಂಬಿಯಾನ್ಗೆ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು.
ಇದೀಗ ಈ ಸಹೋದರ-ಸಹೋದರಿ ಜೋಡಿ ನೋರಾ ಫತೇಹಿ ಅವರ ಕುಸು ಕುಸು ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಜಾನ್ ಅಬ್ರಹಾಂ ಮತ್ತು ದಿವ್ಯಾ ಖೋಸ್ಲಾ ಕುಮಾರ್ ಅಭಿನಯದ ಸತ್ಯಮೇವ ಜಯತೆ-2 ಚಿತ್ರದ ಕುಸು ಕುಸು ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ತಮ್ಮ ಭಾರತೀಯ ಅಭಿಮಾನಿಗಳ ಗಮನ ಸೆಳೆದಿದೆ. ಸಹೋದರಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ರೆ, ಆಕೆಯ ಹಿಂದೆ ನಿಂತಿರುವ ಸಹೋದರ ಈ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾನೆ.
ಜೀವನ ನಿರ್ವಹಣೆಗಾಗಿ ಮದ್ಯದಂಗಡಿ ತೆರೆದ ಹಾಸ್ಯನಟ….!
ನಮಸ್ತೆ ಇಂಡಿಯಾ, ಕುಸು ಕೂಸು ಇಲ್ಲಿದೆ….. ಆನಂದಿಸಿ ಎಂದು ಸಹೋದರ ಕಿಲಿ ಪಾಲ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಮೂಲ ಹಾಡಿನಲ್ಲಿ ಪ್ರದರ್ಶನ ನೀಡಿದ ನೋರಾ ಫತೇಹಿ ಅವರನ್ನು ಪೋಸ್ಟ್ನಲ್ಲಿ ಟ್ಯಾಗ್ ಮಾಡಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ 36,000 ಕ್ಕೂ ಹೆಚ್ಚು ಜನರು ಲೈಕ್ಸ್ ನೀಡಿದ್ದಾರೆ. ಸೋದರ-ಸೋದರಿಯ ಸರಳವಾದ ನೃತ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=PpRhXnv-Pa8