ಬಿಎಂಡಬ್ಲ್ಯೂ ಕಾರಿನಲ್ಲಿ ಬಂದ ಇಬ್ಬರು ಪುರುಷರು ಜಿ20 ಶೃಂಗದ ವಿಶೇಷ ಕಾರ್ಯಕ್ರಮಗಳಿಗೆ ಎಂದು ಅಲಂಕರಿಸಲಾಗಿದ್ದ ಹೂಕುಂಡಗಳನ್ನು ಕದ್ದೊಯ್ಯುತ್ತಿರುವ ವಿಡಿಯೋವೊಂದು ನಾಗ್ಪುರದ ವಾರ್ಧಾ ರಸ್ತೆಯಲ್ಲಿ ರೆಕಾರ್ಡ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೆಳ್ಳಿ ಬಣ್ಣದ ಬಿಎಂಡಬ್ಲ್ಯೂ ಕಾರಿನಲ್ಲಿ ಇಬ್ಬರು ಬಂದಿದ್ದು, ಅದರಲ್ಲಿ ಒಬ್ಬ ಹ್ಯಾಟ್ ಧರಿಸಿದ್ದಾನೆ. ನೋಡ ನೋಡುತ್ತಲೇ ಕಾರಿನ ಡಿಕ್ಕಿಯಲ್ಲಿ ಹೂಕುಂಡಗಳನ್ನು ಜೋಡಿಸಿಟ್ಟುಕೊಂಡಿದ್ದಾರೆ.
ಇದಕ್ಕೂ ಮುನ್ನ ಗುರುಗ್ರಾಮದಲ್ಲಿ ಇಂಥದ್ದೇ ಘಟನೆ ಜರುಗಿದ್ದು, ಕಿಯಾ ಕಾರಿನಲ್ಲಿ ಬಂದ ಪುರುಷರು ಹೂಕುಂಡಗಳನ್ನು ಕದ್ದೊಯ್ಯುತ್ತಿರುವ ದೃಶ್ಯಗಳು ಸಹ ಎಲ್ಲೆಡೆ ವೈರಲ್ ಆಗಿದ್ದವು.
ಟ್ವಿಟ್ಟಿಗ ಸಮುದಾಯದ ಮಂದಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.