
ನಾಯಿಗಳು ಅತ್ಯಂತ ಪ್ರೀತಿಯ ಜೀವಿಗಳು. ಅವುಗಳು ತಮ್ಮ ಮಾಲೀಕರು ಮತ್ತು ಅವರು ಪ್ರೀತಿಸುವ ಜನರನ್ನು ರಕ್ಷಿಸುತ್ತವೆ. ಸಾಕು ನಾಯಿಯೊಂದು ಪುಟ್ಟ ಹುಡುಗಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.
ತಾಯಿಯೊಬ್ಬಳು ಮಗುವಿಗೆ ಗದರಿಸಿ ಹೊಡೆಯುವಂತೆ ನಾಟಕ ಮಾಡಿದ ಸಂದರ್ಭದಲ್ಲಿ ನಾಯಿಯೊಂದು ಆಕೆಯನ್ನು ರಕ್ಷಿಸಲು ಧಾವಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ನಾಯಿಯ ಇನ್‌ಸ್ಟಾಗ್ರಾಮ್ ಖಾತೆಯಾದ ‘ಮೊಮೊ ಕಾಕರ್ ಸ್ಪೈನಿಯಲ್’ ಎಂಬ ಪುಟದಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. “ಸಹೋದರಿ, ನಾನು ಯಾವಾಗಲೂ ನಿನಗಾಗಿ ಇದ್ದೇನೆ” ಎಂಬ ಶೀರ್ಷಿಕೆಯನ್ನು ನಾಯಿ ಹೇಳಿದಂತೆ ವಿಡಿಯೋಗೆ ನೀಡಲಾಗಿದೆ.
ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಕೋಪಗೊಂಡಂತೆ ನಟಿಸುತ್ತಾರೆ ಮತ್ತು ಅವರ ಸಾಕು ನಾಯಿ ಮೊಮೊ ತನ್ನ ಮಗಳನ್ನು ರಕ್ಷಿಸಲು ನುಗ್ಗಿದಾಗ ಆಕೆಗೆ ಹೊಡೆಯಲು ಮುಂದಾಗುತ್ತಾರೆ. ಇದು ನಿಜವೆಂದು ಭಾವಿಸುವ ನಾಯಿ, ಮಹಿಳೆಯ ಹೊಡೆತಗಳಿಂದ ರಕ್ಷಿಸುವ ಸಲುವಾಗಿ ಹುಡುಗಿಯ ದೇಹದ ಸುತ್ತಲೂ ತನ್ನ ಪಂಜಗಳನ್ನು ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.