ನವದೆಹಲಿ: 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ 76 ಅಡಿ ಎತ್ತರದ ಸ್ತಂಭದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಡಿದೆ. ಭಾರತೀಯ ಸೇನೆ ಮತ್ತು ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ಲಡಾಖ್ ನ ಹ್ಯಾನ್ಲೆ ಕಣಿವೆಯ ಪ್ರದೇಶದಲ್ಲಿ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗಿದೆ.
15,000 ಅಡಿ ಎತ್ತರದ ಪ್ರದೇಶದಲ್ಲಿ 76 ಅಡಿ ಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಾಡಿದ್ದು, ಸೈನಿಕರು ಗೌರವ ವಂದನೆ ಸಲ್ಲಿಸಿದ್ದಾರೆ. ಹಿಮಚ್ಚಾದಿತ ಎತ್ತರದ ಕಣಿವೆ ಪ್ರದೇಶಯಲ್ಲಿ ತ್ರಿವರ್ಣಧ್ವಜ ಕಂಗೊಳಿಸಿದೆ. ಹಿನ್ನೆಲೆಯಲ್ಲಿ ಕೇಳುವ ರಾಷ್ಟ್ರ ಗೀತೆ ಈ ವಿಡಿಯೋಗೆ ಮೆರುಗು ತಂದಿದೆ.