ಸಾಮಾಜಿಕ ಜಾಲತಾಣ ಅನನ್ಯ ವಿಡಿಯೋ ಮತ್ತು ಚಿತ್ರಗಳಿಂದ ತುಂಬಿಹೋಗಿರುತ್ತದೆ.
ʼದಿ ಫಿಗೆನ್ʼ ಎಂಬ ಟ್ವೀಟರ್ ಬಳಕೆದಾರರು ಹಳೆಯ ಆಮೆಯೊಂದು ನೀರಿನ ಅಡಿಯಲ್ಲಿ ಈಜುತ್ತಿರುವ ಕಿರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ಆಮೆಯು ಪ್ರಕೃತಿಯ ಅಚ್ಚರಿಗಳಲ್ಲೊಂದು. ಅದು ಪಾಚಿಯಿಂದ ಆವೃತವಾಗಿದ್ದ 91 ವರ್ಷ ವಯಸ್ಸಿನ ಆಮೆಯಾಗಿದೆ ಎಂಬುದು ವಿಶೇಷ.
90 ವರ್ಷ ದಾಟಿದ ನಂತರವೂ ಆಮೆಗಳು ದೀರ್ಘಾಯುಷ್ಯವನ್ನು ಹೇಗೆ ಜೀವಿಸುತ್ತವೆ ಎಂದು ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಟ್ವೀಟ್ ಬಳಕೆದಾರರು ಈಗಾಗಲೇ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.
ಆಮೆ ಸಂರಕ್ಷಣಾ ಸೊಸೈಟಿಯ ಪ್ರಕಾರ, ಆಮೆಯ ಜೀವಿತಾವಧಿಯು ಅದರ ಜಾತಿಯ ಮೇಲೆ ಬದಲಾಗುತ್ತದೆ. ಒಂದು ವಿಶಿಷ್ಟವಾದ ಸಾಕು ಆಮೆ 10-80 ವರ್ಷಗಳ ನಡುವೆ ಬದುಕಬಲ್ಲದು, ಆದರೆ ಸಮುದ್ರ ಆಮೆ 30-50 ವರ್ಷಗಳ ನಡುವೆ ಬದುಕಬಲ್ಲದು.
ಈ ಹಿಂದೆ ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾದ ದಕ್ಷಿಣ ಅಟ್ಲಾಂಟಿಕ್ ದ್ವೀಪದಲ್ಲಿ 190 ವರ್ಷ ವಯಸ್ಸಿನ ದೈತ್ಯ ಆಮೆ ಕಂಡುಬಂದಿತ್ತು. ಅಂದಾಜು ಅದು 1832ರಲ್ಲಿ ಜನಿಸಿದ್ದಿರಬಹುದೆಂದು ಅಂದಾಜಿಸಲಾಗಿತ್ತು. ಜನವರಿಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಿಂದ ಅತ್ಯಂತ ಹಳೆಯ ಜೀವಂತ ಆಮೆ ಎಂದು ಗುರುತಿಸಲ್ಪಟ್ಟಿತು.