
ಆಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಬೀದಿ ನಾಯಿಗಳ ಗುಂಪೊಂದು ಯುವತಿಯ ಮೇಲೆ ದಾಳಿ ಮಾಡಿದೆ.
ವಿಡಿಯೋದಲ್ಲಿ ರಾಜಸ್ಥಾನದ ಹುಡುಗಿ ನವ್ಯಾ ಫೋನ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ಬೀದಿ ನಾಯಿಗಳ ಗುಂಪೊಂದು ಅವಳ ಮೇಲೆ ದಾಳಿ ಮಾಡಿದೆ. ಕಚ್ಚಿ ಗಾಯಗೊಳಿಸಲು ನಾಯಿಗಳ ಹಿಂಡು ಮುಂದಾಗಿದ್ದು, ಯುವತಿ ನೆಲಕ್ಕೆ ಬಿದ್ದಿದ್ದಾಳೆ.
ನೆರೆಹೊರೆಯವರು ಕೂಗಾಟ ಕೇಳಿ ಧಾವಿಸಿ ಬಂದಿದ್ದು, ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಯುವತಿ 15-20 ಸೆಕೆಂಡುಗಳ ಕಾಲ ಕಿರುಚಾಡಿದ್ದು, ನಂತರ ನೆರೆಹೊರೆಯವರು ನಾಯಿಗಳ ದಾಳಿ ಕೇಳಿ ಓಡಿಸಲು ಬಂದಿದ್ದಾರೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಾರಿಹೋಕ ಮಹಿಳೆಯೊಬ್ಬರು ವಾಹನ ನಿಲ್ಲಿಸಿ ನಾಯಿಗಳ ದಾಳಿಯಿಂದ ಹುಡುಗಿಯನ್ನು ರಕ್ಷಿಸಿದ್ದಾರೆ.
ವಿಡಿಯೊವನ್ನು ಇಲ್ಲಿ ವೀಕ್ಷಿಸಿ:
A Pack of Stray Dogs attacked a girl in #Alwar city, #Rajasthan, caught in #CCTV
The girl was walking outside her house, when 8-9 #StrayDogs suddenly pounced on her.
She escaped sharply, on hearing her scream, a woman stopped her scooter and drove the dog away,… pic.twitter.com/DXoL9UmeFA
— Surya Reddy (@jsuryareddy) March 8, 2025