alex Certify ʼವಯಸ್ಸುʼ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಯಸ್ಸುʼ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ವಯಸ್ಸು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಹೇಳುವವರು ಮತ್ತು ಉತ್ಸಾಹ ಭರಿತವಾಗಿ ಜೀವನ ಸಾಗಿರುವವರು ನಮ್ಮ ನಡುವೆ ಕಾಣಸಿಗುತ್ತಾರೆ. ಜಗತ್ತಿನಲ್ಲಿ ಬಹಳಷ್ಟು ಜನರು ನಮಗೆ ಸ್ಫೂತಿರ್ಯಾಗಿಯೂ ಕಾಣಿಸುತ್ತಾರೆ. ಅವರು ಯೋಚಿಸಲಾಗದನ್ನು ಸಹ ಸಾಧಿಸುತ್ತಾರೆ, ಅದು ಇತರರಿಗೆ ಪ್ರೇರಣೆ ನೀಡುತ್ತದೆ.

ಅವರಲ್ಲಿ ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾಣಿಸಿಕೊಂಡರೆ, ಇತರರು ಅದನ್ನು ಸಂರ್ಪೂಣ ಇಚ್ಛಾಶಕ್ತಿಯಿಂದ ಮಾಡುತ್ತಾರೆ. ತಮ್ಮ ವಯಸ್ಸು, ಅಂಗವೈಕಲ್ಯ ಅಥವಾ ಇತಿಮಿತಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇಷ್ಟೆಲ್ಲ ಪೀಠಿಕೆ ಏಕೆಂದರೆ, 102 ರ ಹರೆಯದ ಚಿರ ಯುವಕ ಓಟದಲ್ಲಿ ಭಾಗವಹಿಸಿದ್ದಾರೆ. ಇವರ ಓಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವಿಡಿಯೋವನ್ನು ವಾಲಾ ಅಫ್ಸರ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಿಮ್ಮ ಕನಸುಗಳಿಗೆ ವಯಸ್ಸಿನ ಮಿತಿಯನ್ನು ಎಂದಿಗೂ ಹಾಕಬೇಡಿ. ಈ ಮನುಷ್ಯ 1917 ರಲ್ಲಿ ಜನಿಸಿದನು, 102ನೇ ವಯಸ್ಸಿನಲ್ಲಿ ಓಟವನ್ನು ನಡೆಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಆ ವಿಡಿಯೋ ತುಣುಕಿನಲ್ಲಿ ಕೇವಲ ವೃದ್ಧರು ಮಾತ್ರ ಭಾಗವಹಿಸುವ ಓಟವನ್ನು ತೋರಿಸಿದ್ದಾರೆ. ಅಲ್ಲಿದ್ದ ಇತರರು ಜಾಗಿಂಗ್​ ಮತ್ತು ಓಡಲು ಸಾಧ್ಯವಾಗುವಷ್ಟು ವಯಸ್ಸಾಗಿದ್ದರೂ, ಅವರ ನಡುವೆ ಗಮನ ಸೆಳೆದ ವ್ಯಕ್ತಿಗೆ 102 ವರ್ಷ ವಯಸ್ಸಾಗಿತ್ತು. ಆ ವೀಡಿಯೊ 2019 ರದ್ದಾಗಿದೆ. ಇತರರು ರೇಸ್​ ಅನ್ನು ಹೆಚ್ಚು ವೇಗವಾಗಿ ಮುಗಿಸಿದರೂ ಕ್ರೀಡಾಂಗಣದಲ್ಲಿದ್ದ ಎಲ್ಲರೂ ಈ ವೃದ್ಧ ವ್ಯಕ್ತಿಯನ್ನು ಹೆಚ್ಚು ಹುರಿದುಂಬಿಸಿದರು.

ಆ ವೃದ್ಧ ಕೊನೆಯದಾಗಿ ಬಂದರೂ, ಓಟವನ್ನು ಮುಗಿಸುವವರೆಗೂ ಗುರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಿಲ್ಲ, ಮುಖದಲ್ಲಿ ನಗುವಿನೊಂದಿಗೆ ಓಟವನ್ನು ಮುಗಿಸಿದರು ಎಂಬುದು ಶ್ಲಾಘನೀಯ ವಿಚಾರ.

ವೀಡಿಯೊವನ್ನು ಸೆಪ್ಟೆಂಬರ್​ 5 ರಂದು ಪೋಸ್ಟ್​ ಮಾಡಲಾಗಿದ್ದು, ಇದು 3.4 ಕೋಟಿಗೂ ಹೆಚ್ಚು ವೀಕ್ಷಣೆ ಮತ್ತು 1.09 ಲೈಕ್​ ಪಡೆದುಕೊಂಡಿದೆ. ನೆಟ್ಟಿಗರು ಇದರಿಂದ ತಾವೆಷ್ಟು ಸ್ಫೂರ್ತಿ ಪಡೆದುಕೊಂಡೆವು ಎಂದು ಕಾಮೆಂಟ್​ ಮಾಡಿದ್ದಾರೆ.

https://twitter.com/MJ_Famyfuerza/status/1568949506607300608?ref_src=twsrc%5Etfw%7Ctwcamp%5Etweetembed%7Ctwterm%5E1568949506607300608%7Ctwgr%5Ef86c51b34d5bab8d25f19db545396c713f7c6ac2%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-102-year-old-man-taking-part-in-race-inspires-the-internet-5962363.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...