alex Certify WATCH | ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ನೀರು ಪೋಲು; ಅರಿವು ಮೂಡಿಸಲು ಪೆಟಾ ಸಂಸ್ಥಾಪಕಿಯಿಂದ ನಡು ರಸ್ತೆಯಲ್ಲೇ ಸ್ನಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH | ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ನೀರು ಪೋಲು; ಅರಿವು ಮೂಡಿಸಲು ಪೆಟಾ ಸಂಸ್ಥಾಪಕಿಯಿಂದ ನಡು ರಸ್ತೆಯಲ್ಲೇ ಸ್ನಾನ

ಮಾಂಸ ಮತ್ತು ಡೈರಿ ಉತ್ಪನ್ನಗಳಿಗಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಸಸ್ಯಹಾರ, ಧಾನ್ಯ, ಬೇಳೆಕಾಳುಗಳ ಉತ್ಪಾದನೆಗಿಂತ ಶೇಕಡ 50ರಷ್ಟು ಹೆಚ್ಚು ಎಂದು ಹೇಳಿರುವ ಪ್ರಾಣಿ ಸಂರಕ್ಷಣಾ ಸಂಸ್ಥೆ (ಪೆಟಾ) ಭಾರತದ ಸಂಸ್ಥಾಪಕಿ Ingrid Newkirk ಈ ಕುರಿತು ಅರಿವು ಮೂಡಿಸುವ ಸಲುವಾಗಿ ನಡುರಸ್ತೆಯಲ್ಲೇ ಸ್ನಾನ ಮಾಡಿದ್ದಾರೆ.

ಮುಂಬೈ ಬೀದಿಯಲ್ಲಿ ಅವರು ಸ್ನಾನ ಮಾಡಿದ್ದು, ಇದರ ವಿಡಿಯೋವನ್ನು ಪ್ರಾಣಿ ಸಂರಕ್ಷಣಾ ಸಂಸ್ಥೆ (ಪೆಟಾ ಇಂಡಿಯಾ) ತನ್ನ ಸಾಮಾಜಿಕ ಜಾಲತಾಣ ಖಾತೆ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಹಾರಿಗಳಿದ್ದಾರೆ. ನೀವು ಇದರ ಅರಿವು ಮೂಡಿಸಲು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದರೆ ವಿಮಾನದ ಟಿಕೆಟ್, ಹೋಟೆಲ್ ರೂಮ್ ವೆಚ್ಚವನ್ನು ನಾನು ಭರಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಮತ್ತೊಬ್ಬರು ಮುಂಬೈ ಪೊಲೀಸರಿಗೆ ಪೆಟಾ ಇಂಡಿಯಾದ ಟ್ವಿಟರ್ ಅನ್ನು ಟ್ಯಾಗ್ ಮಾಡಿದ್ದು, ರಸ್ತೆ ಬದಿ ಕಾರನ್ನು ತೊಳೆಯುವುದಕ್ಕೆ ಮುಂಬೈನಲ್ಲಿ ನಿಷೇಧವಿದ್ದು, ನೀವು ಅದೇಗೆ ಸಾರ್ವಜನಿಕ ಸ್ಥಳದಲ್ಲಿ ಸ್ನಾನ ಮಾಡಲು ಅವಕಾಶ ಕಲ್ಪಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

— PETA India (@PetaIndia) December 1, 2022

https://twitter.com/whoispadav/status/1598367297659604992?ref_src=twsrc%5Etfw%7Ctwcamp%5Etweetembed%7Ctwterm%5E1598367297659604992%7Ctwgr%5Ecdbecc885d6f672fcdbfa124d376a77543d421ad%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-fpressjr%2Fwatchpetaindiafounderingridnewkirktakesshoweronroadinmumbaitohighlightwastageofwaterinmeatanddairyproduction-newsid-n447672760%3Fs%3Dauu%3D0x61fbe37283098391ss%3Dwsp

https://twitter.com/VishnuNair9971/status/1598390460850245633?ref_src=twsrc%5Etfw%7Ctwcamp%5Etweetembed%7Ctwterm%5E1598390460850245633%7Ctwgr%5Ecdbecc885d6f672fcdbfa124d376a77543d421ad%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-fpressjr%2Fwatchpetaindiafounderingridnewkirktakesshoweronroadinmumbaitohighlightwastageofwaterinmeatanddairyproduction-newsid-n447672760%3Fs%3Dauu%3D0x61fbe37283098391ss%3Dwsp

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...