ಸಾರ್ವಜನಿಕವಾಗೇ 30 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದು, ಕಣ್ಮುಂದೆ ಘಟನೆ ನಡೆಯುತ್ತಿದ್ದರೂ ಜನ ತಮ್ಮ ಪಾಡಿಗೆ ತಾವಿದ್ದ ಘಟನೆ ದೆಹಲಿಯ ಬದರ್ ಪುರ್ ನಲ್ಲಿ ನಡೆದಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆ ಭಾರೀ ಗಮನ ಸೆಳೆಯುತ್ತಿದೆ. ವೀಡಿಯೊದಲ್ಲಿ, ಬದರ್‌ಪುರದ ತಾಜ್‌ಪುರ ಪಹಾಡಿ ನೆರೆಹೊರೆಯಲ್ಲಿ ಇಬ್ಬರು ವ್ಯಕ್ತಿಗಳು ಸಂತ್ರಸ್ತ ಕೇಶವ್‌ನನ್ನು ಕೋಲುಗಳಿಂದ ಥಳಿಸಿದ್ದಾರೆ. ಮೂರನೇ ವ್ಯಕ್ತಿ ಕೇಶವ್ ನನ್ನು ಇರಿದಿದ್ದಾನೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿದೆ.
ಸಂತ್ರಸ್ತನನ್ನು ಥಳಿಸಿ ನಂತರ ಇರಿಯುತಿದ್ದರೂ ಜನ ಸುಮ್ಮನೆ ನೋಡುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರು. ಜಗಳವನ್ನು ತಪ್ಪಿಸಲು ಅಥವಾ ಸಂತ್ರಸ್ತನನ್ನು ಉಳಿಸಲು ಯಾರೂ ಪ್ರಯತ್ನಿಸಿಲ್ಲ.
ಹಲ್ಲೆ ಬಳಿಕ ಕೇಶವ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ (ಎಐಐಎಂಎಸ್) ಕರೆದೊಯ್ಯಲಾಯಿತಾದ್ರೂ ದಾರಿಯಲ್ಲೇ ಸಾವನ್ನಪ್ಪಿರೋದಾಗಿ ವೈದ್ಯರು ಘೋಷಿಸಿದ್ರು.
ಪೊಲೀಸರ ಪ್ರಕಾರ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದ್ದುಅಪರಾಧಕ್ಕೆ ಬಳಸಿದ ಚಾಕು ವಶಪಡಿಸಿಕೊಳ್ಳಲಾಗಿದೆ.