
ಇಬ್ಬರು ಮಕ್ಕಳು ರಸ್ತೆಯ ಮಧ್ಯದಲ್ಲಿ ತೆರೆದ ಮ್ಯಾನ್‌ಹೋಲ್ ಅನ್ನು ಮುಚ್ಚುವುದನ್ನು ವಿಡಿಯೋ ತೋರಿಸುತ್ತದೆ. ರಸ್ತೆಯಲ್ಲಿ ಬರುತ್ತಿದ್ದಾಗ ತೆರೆದ ಮ್ಯಾನ್‌ಹೋಲ್ ಅನ್ನು ಗುರುತಿಸಿದ ಮಕ್ಕಳು ನಂತರ ಅದರ ಸುತ್ತಲೂ ಕೆಲವು ದೊಡ್ಡ ಕಲ್ಲುಗಳನ್ನು ತಂದು ಹಾಕುತ್ತಾರೆ.
ಇದು ಆ ರಸ್ತೆಯಲ್ಲಿ ನಡೆಯಬಹುದಾಗಿದ್ದ ಗಂಭೀರ ಅಪಘಾತಗಳನ್ನು ತಪ್ಪಿಸಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
“ನೀವು ಬದಲಾವಣೆಯನ್ನು ಮಾಡಲು ಎಂದಿಗೂ ಚಿಕ್ಕವರಲ್ಲ” ಎಂದು ಶೀರ್ಷಿಕೆ ಹೊಂದಿರುವ ವೀಡಿಯೊದಲ್ಲಿನ ಮಕ್ಕಳ ಕಾರ್ಯವನ್ನ ನೆಟ್ಟಿಗರು ಶ್ಲಾಘಿಸಿದ್ದಾರೆ.