
ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮೂವರು ಆಟಗಾರರು ಪ್ರವಾಸದಿಂದ ಹೊರಗುಳಿದಿದ್ದಾರೆ. ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್ ಗಾಯಗೊಂಡಿದ್ದು, ಅವರ ನಂತ್ರ ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದಾರೆ.
ಗಾಯದ ಕಾರಣ ವಾಷಿಂಗ್ಟನ್ ಸುಂದರ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಇಬ್ಬರೂ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದರು. ಈಗ ಸುಂದರ್ ಮತ್ತು ಅವೇಶ್ ಖಾನ್ ಇಬ್ಬರೂ ಬೆರಳಿನ ಗಾಯದಿಂದಾಗಿ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ.
ವಾಷಿಂಗ್ಟನ್ ಸುಂದರ್ ಬೆರಳಿಗೆ ಪೆಟ್ಟಾಗಿದೆ. ಆದರೂ ಅವರು ಯಾವಾಗ ಗಾಯಗೊಂಡರು ಎಂಬ ಮಾಹಿತಿಯಿಲ್ಲ. ಕೌಂಟಿ ಸೆಲೆಕ್ಟ್ ಇಲೆವೆನ್ ಪರ ಆಡುವಾಗ ವಾಷಿಂಗ್ಟನ್ ಸುಂದರ್ ಕೇವಲ 1 ರನ್ ಗಳಿಸಿದ್ದರು. ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಪ್ರವಾಸದಿಂದ ನಿರ್ಗಮಿಸುವುದು ಭಾರತಕ್ಕೆ ದೊಡ್ಡ ಹೊಡೆತ ಎನ್ನಬಹುದು. ವಾಷಿಂಗ್ಟನ್ ಸುಂದರ್ ಉತ್ತಮ ಬೌಲರ್ ಮತ್ತು ಉತ್ತಮ ಬ್ಯಾಟ್ಸ್ ಮನ್.