ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು.
ದಿನಕ್ಕೆ ಹಲವಾರು ಬಾರಿ ಕೈ ತೊಳೆಯುವುದು ಹಾಗೂ ಆಗಾಗ್ಗೆ ಸ್ಯಾನಿಟೈಜರ್ ಹಚ್ಚುವುದರಿಂದ ಚರ್ಮ ತೇವಾಂಶ ಕಳೆದುಕೊಳ್ಳಬಹುದು. ಕೈಗಳ ತೇವಾಂಶ ಮತ್ತು ಮೃದುತ್ವ ಕಾಪಾಡಿಕೊಳ್ಳಲು ನಾವು ಹೆಚ್ಚು ಕಾಳಜಿ ವಹಿಸಬೇಕು. ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸದೇ ನೈಸರ್ಗಿಕ ವಿಧಾನದಿಂದ ಚರ್ಮದ ಕಾಳಜಿ ಮಾಡಬಹುದು.
ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..!
ಆಲೋವೆರಾ ಜೆಲ್ ಅಥವಾ ಉತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಬಳಸುವುದು ಉತ್ತಮ. ಸೌಂದರ್ಯವರ್ಧಕಗಳ ಬಳಕೆ ಆದಷ್ಟು ಕಡಿಮೆ ಮಾಡಿ. ಮುಖ ಕೈಕಾಲುಗಳನ್ನು ತೊಳೆಯುವಾಗ ಕೇವಲ ಬೆಚ್ಚಗಿನ ನೀರನ್ನು ಮಾತ್ರ ಬಳಸಿ.
ಮೊಸರು ಮತ್ತು ಬೇವಿನ ಫೇಸ್ ಪ್ಯಾಕ್ ಚರ್ಮ ಡ್ರೈ ಆಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ. ವ್ಯಾಸಲೀನ್ ಕೂಡ ಬಳಸಬಹುದು. ನಿಂಬೆ ಮತ್ತು ಗ್ಲಿಸರಿನ್ ಸಮ ಪ್ರಮಾಣದಲ್ಲಿ ರೋಸ್ ವಾಟರ್ನೊಂದಿಗೆ ಮಿಕ್ಸ್ ಮಾಡಿ ಮಲಗುವ ಮುನ್ನ ಕೈಕಾಲುಗಳಿಗೆ ಮಸಾಜ್ ಮಾಡಬೇಕು.
ಬೆಚ್ಚಿಬೀಳಿಸುವಂತಿದೆ ಈ ಸುದ್ದಿ..! ಟಿಕ್ ಟಾಕ್ ವೀಕ್ಷಣೆಯಿಂದ ಹೆಚ್ಚಾಗ್ತಿದೆ ಟಿಕ್ ಡಿಸಾರ್ಡರ್
ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ. ಮುಖಕ್ಕೆ ಬಾದಾಮಿ ಎಣ್ಣೆ ಬಳಸುವುದರಿಂದ ಕಪ್ಪು ಕಲೆಗಳನ್ನು ಕಡಿಮೆಯಾಗಿ ಮುಖದ ಸುಕ್ಕು ಕಡಿಮೆಯಾಗಿ ಮುಖ ಕಾಂತಿ ಪಡೆಯುತ್ತದೆ.
ಎಣ್ಣೆ ಮಸಾಜ್ ನಿಂದ ಕೈಗಳ ಚರ್ಮ ಮೃದುವಾಗುತ್ತದೆ. ತೆಂಗಿನಕಾಯಿ ಅಥವಾ ಸಾಸಿವೆ ಎಣ್ಣೆ ಚರ್ಮಕ್ಕೆ ಹೆಚ್ಚುವುದು ಉತ್ತಮ. ಬಿಸಿನೀರಿನ ಬದಲು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು.