ಅಡುಗೆ ಮಾಡುವಾಗ ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕ್ಲೀನ್ ಮಾಡಿದಾಗ ಕೈ ವಾಸನೆ ಬರುತ್ತಿರುತ್ತದೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಾಗಿ ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆಯನ್ನು ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.
*ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ನಿಂಬೆ ಸಿಪ್ಪೆಗಳನ್ನು ಮಿಕ್ಸ್ ಮಾಡಿ ಅದರಲ್ಲಿ ಕೈಗಳನ್ನು ಮುಳುಗಿಸಿ ನಿಂಬೆ ಸಿಪ್ಪೆಯಿಂದ ಉಜ್ಜಿ. ಇದರಿಂದ ಬೆಳ್ಳುಳ್ಳಿ ವಾಸನೆ ಹೋಗುತ್ತದೆ.
*ಕಾಫಿಯಿಂದ ಕೂಡ ಬೆಳ್ಳುಳ್ಳಿ ವಾಸನೆಯನ್ನು ನಿವಾರಿಸಬಹುದು. ನೀರಿನಲ್ಲಿ ಕಾಫಿ ಪುಡಿ ಸೇರಿಸಿ ಅದರಿಂದ ಕೈ ತೊಳೆಯಿರಿ. ಹಾಗೇ ಕಾಫಿ ಪುಡಿಗೆ ಜೇನುತುಪ್ಪ ಮಿಕ್ಸ್ ಮಾಡಿ ಕೈಗೆ ಹಚ್ಚಿಕೊಳ್ಳಿ. ಇದರಿಂದ ಕೈಗಳು ಮೃದುವಾಗುತ್ತವೆ.
*ಬೆಳ್ಳುಳ್ಳಿ ವಾಸನೆಯನ್ನು ನಿವಾರಿಸಲು ಕಿತ್ತಳೆ ಸಿಪ್ಪೆಯನ್ನು ಕೂಡ ಬಳಸಬಹುದು. ಕಿತ್ತಳೆ ಸಿಪ್ಪೆಯನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಆ ನೀರಿನಿಂದ ಕೈತೊಳೆದು ಸಿಪ್ಪೆಯಿಂದ ಕೈಗಳನ್ನು ಉಜ್ಜಿಕೊಳ್ಳಿ.