
ಅಲ್ಲದೆ ‘ಆದಿಪುರುಷ್’ ಚಿತ್ರದಲ್ಲಿ ಬರುವ ಸಂಭಾಷಣೆಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತವೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದು, ಇದನ್ನು ಸರಿಪಡಿಸುವವರೆಗೂ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದರ ಮಧ್ಯೆ ಈಗ ನಿರ್ದೇಶಕ ಓಂ ರಾವುತ್ ಅವರಿಗೆ ಮತ್ತೊಂದು ವಿವಾದ ಥಳಕು ಹಾಕಿಕೊಂಡಿದೆ.
ಎಂಟು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಓಂ ರೌತ್, ‘ಹನುಮಂತನೇನು ಕಿವುಡನೆ ? ನನ್ನ ಅಪಾರ್ಟ್ಮೆಂಟ್ ಸುತ್ತಲಿನ ನಿವಾಸಿಗಳು ದೊಡ್ಡದನಿಯಲ್ಲಿ ಮ್ಯೂಸಿಕ್ ಹಾಕಿಕೊಂಡು ಹನುಮ ಜಯಂತಿ ಆಚರಿಸುತ್ತಿದ್ದಾರೆ. ಅಲ್ಲದೆ ಈ ಹಾಡಿಗೂ ಹನುಮ ಜಯಂತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಇದರಲ್ಲಿ ಹೇಳಿದ್ದಾರೆ.
ಈ ಟ್ವೀಟ್ ಅನ್ನು ಈಗ ಡಿಲೀಟ್ ಮಾಡಲಾಗಿದ್ದರೂ ಸಹ ಇದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಣ ಗಳಿಸಲಷ್ಟೇ ಇವರುಗಳಿಗೆ ದೇವರು ಬೇಕು ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.