ಮನೆಯಲ್ಲಿ ನಾಯಿಯಿದೆ ಎಂಬ ಬೋರ್ಡ್ ಗಳನ್ನು ಭಾರತದ ಅನೇಕ ಮನೆ ಮುಂದೆ ನಾವು ನೋಡ್ತೆವೆ. ಆದ್ರೆ ಬ್ರಿಟನ್ ನಲ್ಲಿ ಸಾಕು ನಾಯಿ ಇದೆ ಎಂಬ ವಿಷ್ಯವನ್ನು ಮುಚ್ಚಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕು ನಾಯಿಗಳ ಕುರಿತಾಗಿ ಎಲ್ಲರೂ ಚಿಂತೆಗೀಡಾಗಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ಕೆಲವು ಮನೆಗಳ ಹೊರಗೆ ಅಂಟಿಸಿರುವ ಬ್ಲೂ ಸ್ಟಿಕ್ಕರ್.
ಬ್ರಿಟನ್ ನ ಕೆಲ ಮನೆಗಳ ಮುಂದೆ ಬ್ಲೂ ಸ್ಟಿಕ್ಕರ್ ಅಂಟಿಸಲಾಗಿದೆ. ಗಂಡು ನಾಯಿ ಇರುವ ಮನೆ ಮುಂದೆಯೇ ಈ ಸ್ಟಿಕ್ಕರ್ ಅಂಟಿಸಲಾಗಿದೆ ಎಂಬ ಮಾತು ಕೇಳಿ ಬರ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಮಹಿಳೆ ಈ ಬಗ್ಗೆ ಹೇಳಿದ್ದಾಳೆ. ಈ ಬ್ಲೂ ಸ್ಟಿಕ್ಕರ್ ಗಳು ಬೆಲೆಬಾಳುವ ಸಾಕು ನಾಯಿಗಳನ್ನು ಟಾರ್ಗೆಟ್ ಮಾಡಲು ಆಗಿರಬಹುದು ಎಂದು ಆಕೆ ಹೇಳಿದ್ದಾರೆ. ಏಕೆಂದರೆ ಯಾರ ಯಾರ ಮನೆಯಲ್ಲಿ ಗಂಡು ನಾಯಿಗಳಿವೆಯೋ ಅವರ ಮನೆಗಳಲ್ಲಿ ಮಾತ್ರ ಈ ನೀಲಿ ಸ್ಟಿಕರ್ ಕಾಣಿಸಿದೆ. ಮನೆಯ ಹೊರಗಡೆ ಈ ನೀಲಿ ಸ್ಟಿಕರ್ ಕಾಣಿಸಿದ ಮೇಲೆ ಆ ಮಹಿಳೆ ಎಲ್ಲರನ್ನೂ ಎಚ್ಚರಿಸಿದ್ದಾಳೆ.
ಯಾವಾಗ ನಾನು ಮನೆಯ ಬಾಗಿಲು ತೆಗೆದು ಹೊರಗಡೆ ನೋಡಿದೆನೋ ಆಗ ನನಗೆ ಈ ಸ್ಟಿಕರ್ ಕಾಣಿಸಿತು. ಮೊದಲು ಯಾವಾಗಲೂ ಹೀಗೆ ಆಗಿರಲಿಲ್ಲ. ಹಾಗಾಗಿ ನಾನು ಎಲ್ಲ ನಾಯಿ ಮಾಲೀಕರಿಗೆ ನಿಮ್ಮ ಮನೆಯ ಹೊರಗಡೆಯೂ ಈ ತರಹದ ಸ್ಟಿಕರ್ ಇದೆಯಾ ಎಂದು ನೋಡಿ ಎಂದು ಎಚ್ಚರಿಸುತ್ತಿದ್ದೇನೆ ಎಂದು ಇನ್ನೊಬ್ಬ ಹೇಳಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಪೋಸ್ಟ್ ಮಾಡಿದ ಮಹಿಳೆಯ ನನ್ನ ಬಳಿ ಎರಡು ಗಂಡು ನಾಯಿಗಳಿವೆ. ಇದರಲ್ಲಿ ಒಂದು ಬಹಳ ಬೆಲೆಬಾಳುತ್ತದೆ. ಹಾಗಾಗಿ ನಾನು ಈಗ ಮನೆಯ ಹೊರಗಡೆ ಸಿಸಿ ಟಿವಿ ಹಾಕಿಸಿದ್ದೇನೆ ಎಂದಿದ್ದಾಳೆ. ಹಾಗೆಯೇ ತನ್ನ ಬಳಿ ಇರುವ ಒಂದು ನಾಯಿ ಯಾರನ್ನೂ ಮನೆಯ ಒಳಗೆ ಕಾಲಿಡಲು ಬಿಡುವುದಿಲ್ಲ ಎಂದು ಸಮಾಧಾನಪಟ್ಟುಕೊಂಡಿದ್ದಾಳೆ.