ಭಾರತದಲ್ಲಿ ಶಿಶುಗಳ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಶೇ.60 ರಷ್ಟು ಶಿಶುಗಳು ಮೆದುಳಿನ ಗಾಯದಿಂದ ಸಾಯುತ್ತವೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ನಡೆಸಿದ ಸಂಶೋಧನೆಯು ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ ಸರಳ ರಕ್ತ ಪರೀಕ್ಷೆಯ ಮೂಲಕ ಗಾಯವನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದೂ ಹೇಳಲಾಗಿದೆ. ಅಲ್ಲದೆ ಗಾಯದ ಹಿಂದಿನ ಕಾರಣವನ್ನು ಸಹ ಕಂಡುಹಿಡಿಯಬಹುದು.
ನವಜಾತ ಶಿಶುಗಳಲ್ಲಿ ಈ ರೀತಿ ಮೆದುಳಿಗೆ ಹಾನಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದ ಹೈಪೋಕ್ಸಿಕ್-ಇಸ್ಕೆಮಿಕ್ ಎನ್ಸೆಫಲೋಪತಿ (HIE). ಮಗುವಿಗೆ ಜನನದ ಮೊದಲು ಅಥವಾ ಜನನದ ತತ್‌ಕ್ಷಣ ಸಾಕಷ್ಟು ಆಮ್ಲಜನಕ ಸಿಗದೇ ಇದ್ದಾಗ ಮೆದುಳಿನಲ್ಲಿ ಗಾಯವಾಗುತ್ತದೆ.
HIE ಸ್ಥಿತಿಯೊಂದಿಗೆ ಜನಿಸಿದ ಶಿಶುಗಳಲ್ಲಿ ಸಾವು ಮತ್ತು ಅಂಗವೈಕಲ್ಯ ಸಂಭವಿಸುತ್ತದೆ. ಇದು ಪ್ರತಿ ವರ್ಷ ಸುಮಾರು 3 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆಮ್ಲಜನಕದ ಕೊರತೆಯಿಂದಾಗಿ ಮೆದುಳಿನ ಗಾಯವು ಗಂಟೆಗಳಿಂದ ತಿಂಗಳುಗಳವರೆಗೆ ಮುಂದುವರಿಯುತ್ತದೆ ಮತ್ತು ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
ಇದು ತಲೆನೋವು, ಅಪಸ್ಮಾರ, ಕಿವುಡುತನ ಅಥವಾ ಕುರುಡುತನದಂತಹ ವಿವಿಧ ಸಂಭಾವ್ಯ ನ್ಯೂರೋಡಿಸೆಬಿಲಿಟಿಗಳಿಗೆ ಕಾರಣವಾಗಬಹುದು. ಸಂಶೋಧಕರ ಪ್ರಕಾರ ಈ ರೋಗ ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಹೆಚ್ಚಾಗಿದೆ. ಒಟ್ಟಾರೆ ಶಿಶುಗಳ ಮರಣದಲ್ಲಿ HIE-ಸಂಬಂಧಿತ ಸಾವುಗಳ ಪ್ರಮಾಣ 60 ಪ್ರತಿಶತದಷ್ಟಿದೆ.
ಸರಳವಾದ ಪರೀಕ್ಷೆಯು ನವಜಾತ ಶಿಶುಗಳಲ್ಲಿ ಮೆದುಳಿನ ಗಾಯದ ಆರಂಭಿಕ ರೋಗನಿರ್ಣಯಕ್ಕೆ ಕಾರಣವಾಗಬಹುದು. ಚಿಕಿತ್ಸೆಯ ನಿರ್ಧಾರಗಳಿಗೆ ಕೂಡ ಇದು ಸಹಾಯ ಮಾಡುತ್ತದೆ.