ಬಹು ನಿರೀಕ್ಷಿತ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಸಹ ಭಾಗವಹಿಸಲಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಮಂಗಳವಾರ ಬಿಡುಗಡೆಯಾದ ವೀಡಿಯೊದಲ್ಲಿ ಮುಸುಕುಧಾರಿ ವ್ಯಕ್ತಿ ಫ್ರಾನ್ಸ್ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ಬೆದರಿಕೆ ಹಾಕಿದ್ದಾನೆ. ಪ್ಯಾಲೆಸ್ತೀನ್ ನೊಂದಿಗಿನ ಸಂಘರ್ಷದ ಮಧ್ಯೆ ‘ಝಿಯೋನಿಸ್ ಆಡಳಿತ’ದ ಪಕ್ಷ ತೆಗೆದುಕೊಳ್ಳುವ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಹೇಳಿದ್ದಾನೆ.
ತನ್ನ ಎದೆಯ ಮೇಲೆ ಪ್ಯಾಲೇಸ್ಟಿನಿಯನ್ ಧ್ವಜವನ್ನು ಹೊದ್ದು ಕಪ್ಪು ಬಟ್ಟೆಯನ್ನು ಧರಿಸಿರುವ ವ್ಯಕ್ತಿ, ಪ್ಯಾರಿಸ್ ಮೂಲಕ “ರಕ್ತದ ನದಿಗಳು ಹರಿಯುತ್ತವೆ” ಎಂದು ಘೋಷಿಸಿದ್ದು, ಇದು ದಾಳಿಯ ಸೂಚನೆ ನೀಡುವಂತಿದೆ. ವ್ಯಕ್ತಿ ನಕಲಿ ಕತ್ತರಿಸಿದ ತಲೆಯನ್ನು ಹಿಡಿದಿರುವ ದೃಶ್ಯವೂ ವೀಡಿಯೊದಲ್ಲಿದೆ.
ವೀಡಿಯೊ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಮತ್ತು ಅದನ್ನು ಅಧಿಕೃತ ಹಮಾಸ್ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿಲ್ಲ. ಆದಾಗ್ಯೂ, ವೀಡಿಯೊದ ಸತ್ಯಾಸತ್ಯತೆ ಅನಿಶ್ಚಿತವಾಗಿಯೇ ಉಳಿದಿದೆ, ಆದರೆ ಇದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭದ್ರತಾ ಅಪಾಯಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
1972 ರ ಮ್ಯೂನಿಚ್ ಗೇಮ್ಸ್ ಮತ್ತು 1996 ರ ಅಟ್ಲಾಂಟಾ ಕ್ರೀಡಾಕೂಟಗಳಂತಹ ಹಿಂದಿನ ಒಲಿಂಪಿಕ್ಸ್ ಗಳು ದಾಳಿಗಳಿಗೆ ಗುರಿಯಾಗಿತ್ತು.
2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 206 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ ಆಟಗಾರರು ಮತ್ತು IOC ನಿರಾಶ್ರಿತರ ಒಲಿಂಪಿಕ್ ತಂಡದಿಂದ ಕ್ರೀಡಾಪಟುಗಳು ಈ ಜಾಗತಿಕ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂದು IOC ದೃಢಪಡಿಸಿದೆ.