ಬೆಂಗಳೂರು : ಒಪ್ಪಿಗೆ ಇಲ್ಲದೇ ರಸ್ತೆ ಅಗೆದರೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಖಡಕ್ ಸೂಚನೆ ನೀಡಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರ ಪಾಲಿಕೆಯ ಅನುಮತಿಯಿಲ್ಲದೇ ರಸ್ತೆ ಅಗೆದರೆ ಇಲಾಖೆಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು . ಕಾಮಗಾರಿ ಹಿನ್ನೆಲೆ ಯಾವುದೇ ಅನುಮತಿ ಇಲ್ಲದೇ ರಸ್ತೆಗಳನ್ನು ಅಗೆಯುವ ಹಾಗಿಲ್ಲ, ಒಂದೇ ವೇಳೆ ಅಗೆದರೆ ದಂಡ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾಗೂ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಗುಂಡಿ ಮುಚ್ಚಿ ನಂತರ ವಾರ್ಡ್ ರಸ್ತೆಗಳಲ್ಲಿ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.