alex Certify ಎ‌ಚ್ಚರ: ಸಮಯಕ್ಕೆ ಸರಿಯಾಗಿ ಈ ಕೆಲಸ ಮಾಡದಿದ್ದರೆ ಆಗಬಹುದು ಹೃದಯಾಘಾತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ‌ಚ್ಚರ: ಸಮಯಕ್ಕೆ ಸರಿಯಾಗಿ ಈ ಕೆಲಸ ಮಾಡದಿದ್ದರೆ ಆಗಬಹುದು ಹೃದಯಾಘಾತ…!

ಸಮಯಕ್ಕೆ ಸರಿಯಾಗಿ ಊಟ-ಉಪಹಾರ ಮಾಡುವವರು ಅಪರೂಪ. ಎಲ್ಲರೂ ಕೆಲಸದ ಒತ್ತಡದ ಜೊತೆಗೆ ಮತ್ತಿನ್ಯಾವುದೋ ಕಾರಣಗಳಿಂದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದಿಲ್ಲ. ಅನೇಕರು  ತಡರಾತ್ರಿಯಲ್ಲಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ರೀತಿ ತಡವಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಅದು ಎಷ್ಟು ಅಪಾಯಕಾರಿ ಎಂದರೆ ನಮ್ಮ ಪ್ರಾಣಕ್ಕೇ ಮಾರಕವಾಗಬಹುದು.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಅಪಾಯವು ಪ್ರತಿ ಗಂಟೆಗೆ 6 ಪ್ರತಿಶತದಷ್ಟು ಹೆಚ್ಚಾಗುತ್ತದೆ. ವಿಶ್ವದ ಮೂರನೇ ಒಂದರಷ್ಟು ಜನರ ಸಾವಿಗೆ ಆಹಾರವೇ ಕಾರಣ ಎಂಬ ಶಾಕಿಂಗ್‌ ಸತ್ಯವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್‌ನ ಅಧ್ಯಯನದ ಪ್ರಕಾರ, 2019 ರಲ್ಲಿ ಒಟ್ಟು 1.86 ಕೋಟಿ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಸುಮಾರು 80 ಲಕ್ಷ ಜನರು ಆಹಾರದಲ್ಲಿನ ವ್ಯತ್ಯಾಸದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದಿರುವುದು ಮತ್ತು ದಿನಚರಿಯಲ್ಲಿ ಸಮತೋಲಿತ ಆಹಾರವನ್ನು ಸೇರಿಸದಿರುವುದು ಈ ಮಟ್ಟದ ಸಾವುಗಳಿಗೆ ಕಾರಣವಾಗಿದೆ.

ಫ್ರೆಂಚ್ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ ತಡವಾಗಿ ಮೊದಲ ಉಪಹಾರ ಮಾಡುವುದರಿಂದ ಹೃದ್ರೋಗದ ಅಪಾಯ  ಹೆಚ್ಚಾಗುತ್ತದೆ. ಈ ಅಪಾಯವು ಪ್ರತಿ ಗಂಟೆಗೆ 6 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಅಂದರೆ ಸಮಯಕ್ಕೆ ಸರಿಯಾಗಿ ತಿನ್ನುವ ವ್ಯಕ್ತಿಗೆ ಹೋಲಿಸಿದರೆ 1 ಗಂಟೆ ತಡವಾಗಿ ತಿನ್ನುವ ವ್ಯಕ್ತಿಗೆ ಹೃದಯಾಘಾತದ ಅಪಾಯವು 6 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಆಹಾರ ಸೇವನೆಯ ಮಾದರಿಗಳು ಮತ್ತು ಹೃದ್ರೋಗದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸಂಶೋಧಕರು 1,033,89 ಜನರ ಡೇಟಾವನ್ನು ಬಳಸಿದ್ದಾರೆ.

ಈ ಅಧ್ಯಯನದ ಪ್ರಕಾರ ದಿನದ ಮೊದಲ ಊಟ ಅಥವಾ ಉಪಹಾರವನ್ನು ಬೆಳಗ್ಗೆ 8 ಗಂಟೆಗೆ ಮಾಡಬೇಕು. ಊಟವನ್ನು 12 ರಿಂದ 1 ಗಂಟೆಯ ನಡುವೆ ತಿನ್ನಬೇಕು. ಸಂಜೆಯ ತಿಂಡಿಗಳನ್ನು ಉಪಹಾರವನ್ನು 5 ಗಂಟೆಗೆ ಸೇವಿಸಬೇಕು. ರಾತ್ರಿಯ ಊಟದ ಸಮಯ 8 ಗಂಟೆ. ಪ್ರತಿ ಮೀಲ್‌ಗಳ ಮಧ್ಯೆ ಕನಿಷ್ಠ 2 ಗಂಟೆಗಳ ಅಂತರ ಇರುವಂತೆ ನೋಡಿಕೊಳ್ಳಬೇಕು.

ಹೀಗೆ ಮಾಡುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಅನೇಕರು ಬೆಳಗ್ಗೆ ಮತ್ತು ಮಧ್ಯಾಹ್ನದ ಊಟಗಳ ನಡುವಿನ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಆದರೆ ರಾತ್ರಿ ತುಂಬಾ ತಡವಾಗಿ ತಿನ್ನುತ್ತಾರೆ. ಇದರಿಂದ ದಿನದ ಕೊನೆಯ ಊಟ ಮತ್ತು ಮರುದಿನದ ಮೊದಲ ಊಟದ ನಡುವಿನ ಅಂತರದಲ್ಲಿ ವ್ಯತ್ಯಾಸವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...