ಸುಂದರವಾದ ಕಣ್ಣುಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಕಣ್ಣುಗಳು ಸುಂದರವಾಗಿರಬೇಕೆಂದರೆ ರೆಪ್ಪೆಗಳಲ್ಲಿ ದಟ್ಟವಾದ ಕೂದಲು ಇರಬೇಕು. ಕಪ್ಪನೆಯ ದಟ್ಟವಾದ ರೆಪ್ಪೆಗೂದಲುಗಳು ಕಣ್ಣುಗಳನ್ನು ಹೆಚ್ಚು ಆಕರ್ಷಕವಾಗಿಸುತ್ತವೆ. ಅಷ್ಟೇ ಅಲ್ಲ ಸೌಂದರ್ಯದ ಜೊತೆಗೆ ರೆಪ್ಪೆಗೂದಲುಗಳು ನಮ್ಮ ಕಣ್ಣುಗಳನ್ನು ರಕ್ಷಿಸುತ್ತವೆ. ಧೂಳು ಮತ್ತು ಕಣಗಳು ಕಣ್ಣಿನೊಳಗೆ ಸೇರದಂತೆ ಕಾಪಾಡುತ್ತವೆ.
ಕೆಲವೊಮ್ಮೆ ರೆಪ್ಪೆಗಳ ಕೂದಲು ಉದುರಲಾರಂಭಿಸುತ್ತದೆ. ರೆಪ್ಪೆಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸುವುದಿಲ್ಲ. ರೆಪ್ಪೆಗಳ ಕೂದಲು ಉದುರುವಿಕೆಗೆ ಕಾರಣ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ರೆಪ್ಪೆಗಳ ಕೂದಲು ಉದುರುವುದು ಅಪಾಯಕಾರಿ ಕಾಯಿಲೆಗಳ ಸಂಕೇತವೂ ಹೌದು. ಹಾಗಾಗಿ ಅದನ್ನು ಅಲಕ್ಷಿಸಬಾರದು.
ಹೈಪೋಥೈರಾಯ್ಡಿಸಮ್
ಥೈರಾಯ್ಡ್ ಹಾರ್ಮೋನ್ ಕೊರತೆಯು ದೇಹದಲ್ಲಿ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ತಲೆ ಕೂದಲು ಮತ್ತು ರೆಪ್ಪೆಗೂದಲುಗಳನ್ನು ದುರ್ಬಲಗೊಳಿಸುತ್ತದೆ. ಹಿಗ್ಗುವಿಕೆ, ದೀರ್ಘಕಾಲದ ಆಯಾಸ ಮತ್ತು ಕೂದಲು ಉದುರುವಿಕೆಯಂತಹ ಥೈರಾಯ್ಡ್‌ನ ಗಂಭೀರ ಲಕ್ಷಣಗಳಲ್ಲಿ ರೆಪ್ಪೆ ಕೂದಲು ಉದುರುವಿಕೆಯೂ ಒಂದು.
ಮೈಸ್ತೇನಿಯಾ ಗ್ರ್ಯಾವಿಸ್
ಇದು ನರಸ್ನಾಯುಕ ಅಸ್ವಸ್ಥತೆಯಾಗಿದ್ದು, ಸ್ನಾಯುಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಕಣ್ಣು ರೆಪ್ಪೆಗಳು ಉದುರುವುದು ಇದರ ಮುಖ್ಯ ಲಕ್ಷಣವಾಗಿದೆ. ಮೈಸ್ತೇನಿಯಾ ಗ್ರ್ಯಾವಿಸ್ ಒಂದು ಗಂಭೀರ ಕಾಯಿಲೆ. ಈ ಕಾಯಿಲೆ ಬಂದರೆ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕಣ್ಣುರೆಪ್ಪೆಗಳು ಸ್ನಾಯುಗಳೊಂದಿಗೆ ಸಂಪರ್ಕ ಹೊಂದಿವೆ. ಸ್ನಾಯುಗಳು ದುರ್ಬಲಗೊಂಡಾಗ ಕಣ್ಣುರೆಪ್ಪೆಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ರೆಪ್ಪೆಗೂದಲುಗಳು ಉದುರುತ್ತವೆ.
ಬೆಲ್ಸ್ ಪಾಲ್ಸಿ
ಇದು ಕಣ್ಣಿನ ರೆಪ್ಪೆ ಮತ್ತು ಮುಖದ ಸ್ನಾಯುಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡುವ ನರದ ಸಮಸ್ಯೆಯಾಗಿದೆ. ಈ ಕಾಯಿಲೆಯಿಂದ ಬಾಯಿ, ಕಣ್ಣುರೆಪ್ಪೆಗಳು ಮತ್ತು ಕೆನ್ನೆಗಳ ಸ್ನಾಯುಗಳು ಕಾರ್ಯನಿರ್ವಹಿಸುವುದಿಲ್ಲ. ಅವುಗಳನ್ನು ಮುಚ್ಚಲು ಅಸಮರ್ಥತೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ರೋಗಿಯ ಒಂದು ಕಣ್ಣು ಸಂಪೂರ್ಣವಾಗಿ ತೆರೆದಿರುತ್ತದೆ ಮತ್ತು ಮುಚ್ಚಲು ಸಾಧ್ಯವಾಗುವುದಿಲ್ಲ.