alex Certify ಎಚ್ಚರ: ಮಕ್ಕಳ ಜೀವಕ್ಕೆ ಕುತ್ತು ತರ್ತಿದೆ ʼಪೀಡಿಯಾಟ್ರಿಕ್ ಕ್ಯಾನ್ಸರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ಮಕ್ಕಳ ಜೀವಕ್ಕೆ ಕುತ್ತು ತರ್ತಿದೆ ʼಪೀಡಿಯಾಟ್ರಿಕ್ ಕ್ಯಾನ್ಸರ್ʼ

ಮಕ್ಕಳ ಕ್ಯಾನ್ಸರ್ ತುಂಬಾ ಅಪಾಯಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಪ್ರಪಂಚದಾದ್ಯಂತ ಪ್ರತಿ ವರ್ಷ 4 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತವೆ. ಈ ಕಾಯಿಲೆಯಿಂದ ಅನೇಕ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಾರೆ.

ಮಕ್ಕಳ ಕ್ಯಾನ್ಸರ್‌ ಪ್ರಕರಣಗಳಲ್ಲಿ 80 ಪ್ರತಿಶತದಷ್ಟನ್ನು ಗುಣಪಡಿಸಬಹುದು. ಆದರೆ ಆರಂಭಿಕ ರೋಗನಿರ್ಣಯದ ಕೊರತೆ, ತಪ್ಪಾದ ರೋಗನಿರ್ಣಯದಿಂದಾಗಿ ಸಾವುಗಳು ಸಂಭವಿಸುತ್ತವೆ. ಇದಲ್ಲದೆ ಚಿಕಿತ್ಸೆಯನ್ನು ಮಧ್ಯದಲ್ಲಿ ಬಿಟ್ಟುಬಿಡುವುದು, ಕ್ಯಾನ್ಸರ್‌ ಮರುಕಳಿಸುವುದು ಕೂಡ ಮಕ್ಕಳ ಸಾವಿಗೆ ಕಾರಣವಾಗುತ್ತದೆ.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಲ್ಯುಕೇಮಿಯಾ, ಟ್ಯೂಮರ್‌, ನರ್ವ್‌ ಸಿಸ್ಟಮ್‌, ನಾನ್‌ ಹಾಕಿಂಗ್ ಲಿಂಫೋಮಾ, ಹಾಕಿಂಗ್ ಲಿಂಫೋಮಾ, ಸಾಫ್ಟ್‌ ಟಿಶ್ಯೂ ಸಾರ್ಕೋಮಾ ಸೇರಿವೆ.

ರೋಗನಿರ್ಣಯ ಮಾಡುವುದು ಹೇಗೆ ?

ಮಕ್ಕಳ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ರಕ್ತ, ಸೀರಮ್, ದೇಹದ ದ್ರವ ಮತ್ತು ಅಂಗಾಂಶವನ್ನು ಒಳಗೊಂಡಂತೆ ಅನೇಕ ರೀತಿಯ ಮಾದರಿಗಳ ಅಗತ್ಯವಿದೆ. ಈ ರೀತಿಯ ಪರೀಕ್ಷೆಗಳ ಮೂಲಕ ಕ್ಯಾನ್ಸರ್ ಪತ್ತೆ ಹಾಗೂ ರೋಗವು ಎಷ್ಟು ಆಳವಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯಲಾಗುತ್ತದೆ.

ಲ್ಯುಕೇಮಿಯಾ ಪತ್ತೆಗಾಗಿ ಬಾಹ್ಯ ಸ್ಮೀಯರ್ ಅಥವಾ ಮೂಳೆ ಮಜ್ಜೆಯನ್ನು ಅಧ್ಯಯನ ಮಾಡಲಾಗುತ್ತದೆ. ನಂತರ ಫ್ಲೋ ಸೈಟೊಮೆಟ್ರಿಯನ್ನು ಅಧ್ಯಯನ ಮಾಡಲಾಗುತ್ತದೆ. ಇದು ಟ್ಯೂಮರ್‌ನ ಕೋಶಗಳಲ್ಲಿನ ಪ್ರತಿಜನಕಗಳನ್ನು ಪತ್ತೆಹಚ್ಚಲು ಫ್ಲೋರೊಸೆನ್ಸ್-ಲೇಬಲ್ ಮಾಡಿದ ಪ್ರತಿಕಾಯಗಳನ್ನು ಬಳಸುತ್ತದೆ ಮತ್ತು ಟ್ಯೂಮರ್‌ ಗಾತ್ರದ ಬಗ್ಗೆ ಮಾಹಿತಿಯನ್ನು ಪಡೆಯುತ್ತದೆ.

ಘನವಾದ ಟ್ಯೂಮರ್‌ಗಳಿದ್ದರೆ ಬಯಾಪ್ಸಿ ಮಾಡಲಾಗುತ್ತದೆ. ನಂತರ ಹಿಸ್ಟೋಪಾಥೋಲಾಜಿಕಲ್ ಪರೀಕ್ಷೆ ಮತ್ತು ಇಮ್ಯುನೊಹಿಸ್ಟೋಕೆಮಿಸ್ಟ್ರಿ ಅಗತ್ಯವಿದ್ದರೆ ವೈದ್ಯರು ಗಡ್ಡೆಯ ಕೋಶಗಳಲ್ಲಿನ ಪ್ರತಿಜನಕಗಳನ್ನು ಮೌಲ್ಯಮಾಪನ ಮಾಡುತ್ತಾರೆ.

ಮಕ್ಕಳಲ್ಲಿ ಟ್ಯೂಮರ್‌ ಉತ್ಪತ್ತಿ ವಯಸ್ಕರಿಗಿಂತ ಭಿನ್ನವಾಗಿ ಮತ್ತು ವಿಶಿಷ್ಟವಾಗಿರುತ್ತದೆ. ಸಾಮಾನ್ಯವಾಗಿ ಆನುವಂಶಿಕತೆಯಿಂದ ಹುಟ್ಟಿಕೊಳ್ಳುತ್ತದೆ. ಆನುವಂಶಿಕ ಬದಲಾವಣೆಗಳನ್ನು ಅಧ್ಯಯನ ಮಾಡದೆಯೇ ಟ್ಯೂಮರ್‌ನ ರೋಗನಿರ್ಣಯ ಅಪೂರ್ಣವಾಗಿರುತ್ತದೆ. ಇಷ್ಟೆಲ್ಲಾ ಆಧುನಿಕ ತಂತ್ರಜ್ಞಾನಗಳಿದ್ದರೂ ಕ್ಯಾನ್ಸರ್‌ ನಿಯಂತ್ರಣಕ್ಕೆ ಬಾರದೇ ಇರುವುದು ಮಾತ್ರ ವಿಪರ್ಯಾಸದ ಸಂಗತಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...