ಬೆಂಗಳೂರು : ಬಿಬಿಎಂಪಿ ಅನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ ಮುದ್ರಿಸಿದ್ರೆ 1 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಬ್ಯಾನರ್, ಫ್ಲೆಕ್ ನಗರದಲ್ಲಿ ಪ್ಲೆಕ್ಸ್, ಬ್ಯಾನರ್ ಮುದ್ರಿಸುವ ಪ್ರತಿಯೊಬ್ಬ ಮುದ್ರಣಕರಿಗೆ ವೈಯಕ್ತಿವಾಗಿ ಆನಧಿಕೃತವಾಗಿ ಯಾವುದೇ ಜಾಹೀರಾತು ಪ್ರಕಟಣೆಗಳನ್ನು ಮುದ್ರಣ ಮಾಡದಂತೆ ಎಚ್ಚರಿಕೆ ನೀಡಬೇಕು. ಈ ಬಗ್ಗೆ ಆ.5ರ ಒಳಗೆ ವರದಿ ನೀಡುವಂತೆ ಎಲ್ಲಾ ವಲಯ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶಿಸಿದ್ದಾರೆ.ಈ ಆದೇಶ ಪತ್ರವನ್ನು ನಗರದ ಲ್ಲಿರುವ ಪ್ರತಿಯೊಬ್ಬ ಪ್ಲೆಕ್ಸ್, ಬ್ಯಾನರ್ ಮುದ್ರಣಕರಿಗೆ ನೀಡಿ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅನುಮತಿ ಇಲ್ಲದೇ ಪ್ಲೆಕ್ಸ್, ಬ್ಯಾನರ್ ಮುದ್ರಣ ಮಾಡಬಾರದು. ಜನ್ಮ ದಿನದ ಶುಭಾಶಯ ತಿಳಿಸುವ, ಸಂತಾಪಗಳು, ಸ್ವಾಗತ ಫಲಕಗಳು ಮುಂತಾದ ಫಲಕಗಳನ್ನು ಅನಧಿಕೃತವಾಗಿ ಅಳವಡಿಸುವಂತಿಲ್ಲ. ಮುದ್ರಣ ಮಾಡಿದರೆ ಉದ್ದಿಮೆ ರದ್ದು ಮಾಡಿ ಒಂದು ವರ್ಷ ಜೈಲು ಹಾಗೂ ₹2 ಲಕ್ಷ ದಂಡ ವಿಧಿಸಲಾಗುವುದು.ಪ್ಲೆಕ್ಸ್ ಮುದ್ರಿಸಲು ಬಂದವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರುವ ಪ್ರತಿಯನ್ನು ಮುದ್ರಕರಿಗೆ ತೋರಿಸ ಬೇಕು. ಗ್ರಾಹಕರು ಮುದ್ರಿಸಲು ಬಯಸುವ ಪ್ಲೆಕ್ಸ್‌ಗಳು, ಬ್ಯಾಟಿ ಬ್ಯಾನರ್‌ಗಳು, ಪೋಸ್ಟರ್‌ಗಳು, ಹೋರ್ಡಿಂಗ್ಗಳ ಕುರಿತಂತೆ ಪಡೆದ ಅನುಮತಿ ಪ್ರತಿಗಳ ನಕಲನ್ನು ಮಾಡಿಟ್ಟುಕೊಳ್ಳಬೇಕು ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.