ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ರೈತರು ಹೋರಾಟ ನಿರಂತರ ಹೋರಾಟ ನಡೆಸಿದ್ದು, ರೈತರ ಪ್ರತಿಭಟನೆಗೆ ವಿದೇಶದಿಂದ ಹಣ ಬಂದಿದೆ ಎನ್ನಲಾಗಿದೆ.
ರೈತರ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್ ಆರೋಪ ಹಿನ್ನಲೆಯಲ್ಲಿ ಸಂಘಟನೆಗೆ ಸಿಂಧ್ ಬ್ಯಾಂಕ್ ನಿಂದ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಭಾರತೀಯ ಕಿಸಾನ್ ಯೂನಿಯನ್ ಗೆ ಬ್ಯಾಂಕ್ ಎಚ್ಚರಿಕೆ ನೀಡಿ, ಕಳೆದ 2 ತಿಂಗಳಲ್ಲಿ 9 ಲಕ್ಷ ರೂಪಾಯಿ ವಿದೇಶದಿಂದ ಬಂದಿದ್ದು, ಹೀಗಾಗಿ ಇದರ ಪೂರ್ಣ ವಿವರ ನೀಡುವಂತೆ ಸೂಚನೆ ನೀಡಲಾಗಿದೆ.
ವಿದೇಶದಲ್ಲಿಯೂ ಸಿಖ್ ಸಮುದಾಯದ ಸಂಘಟನೆಗಳಿವೆ. ಸಮುದಾಯದ ಜನ ದೇಣಿಗೆ ನೀಡಿದ್ದಾರೆ ಎಂದು ರೈತ ಸಂಘಟನೆ ತಿಳಿಸಿದೆ. ರೈತರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.