ಪ್ರತಿದಿನ ಎಷ್ಟು ಲೋಟ ನೀರು ಕುಡಿದರೆ ಅಷ್ಟು ಒಳ್ಳೆಯದು. ಆದರೆ ಒಂದು ಗ್ಲಾಸ್ ನಷ್ಟು ಬಿಸಿ ನೀರನ್ನು ಸಹ ಪ್ರತಿದಿನ ಕುಡಿದರೆ ಮತ್ತಷ್ಟು ಒಳ್ಳೆಯದು. ಪ್ರತಿದಿನ ಈ ರೀತಿ ಮಾಡುವುದರಿಂದ ಆರೋಗ್ಯ ಸುಸ್ಥಿರವಾಗಿರುತ್ತದೆ.
ಮುಂಜಾನೆ ಎದ್ದೊಡನೆ ಸಾಕಷ್ಟು ಜನರು ಉಗುರು ಬೆಚ್ಚಗಿರುವ ನೀರನ್ನು ಕುಡಿಯುತ್ತಾರೆ. ನಿಜವೇನೆಂದರೆ ಊಟ ಮಾಡಿದ ಬಳಿಕ ಬಿಸಿ ನೀರನ್ನು ಸೇವನೆ ಮಾಡುವುದರಿಂದ ಜೀರ್ಣ ವ್ಯವಸ್ಥೆ ಶುಭ್ರಗೊಂಡು ಜೀರ್ಣಕ್ರಿಯೆಗೆ ಸಂಬಂಧಪಟ್ಟಂತಹ ತೊಂದರೆಗಳು ಎದುರಾಗದು.
ದೇಹದಲ್ಲಿ ರಕ್ತ ಪ್ರಸಾರ ಸುಗಮವಾಗಿರುತ್ತದೆ. ಮಲಬದ್ಧತೆ ದೂರವಾಗುತ್ತದೆ. ಚಿಕ್ಕ ಮಕ್ಕಳಿಗೂ ಸಹಿತ ಬಿಸಿನೀರು ಸೇವಿಸುವ ಅಭ್ಯಾಸ ಮಾಡಿಸುವುದು ಒಳಿತು. ಅವರು ಚುರುಕಾಗಿರುತ್ತಾರೆ.
* ದೇಹದಲ್ಲಿ ವ್ಯರ್ಥಗಳು ಸೇರ್ಪಡೆಯಾದಾಗ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಈ ವ್ಯರ್ಥಗಳನ್ನು ದೂರ ಮಾಡಿಕೊಳ್ಳಬಹುದು. ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಹ ಇಳಿಮುಖವಾಗುತ್ತದೆ. ಪ್ರತಿದಿನ ನಾವು ಸೇವಿಸುವ ಬಿಸಿನೀರಿನಲ್ಲಿ ನಾಲ್ಕೈದು ಹನಿಗಳಷ್ಟು ನಿಂಬೆರಸವನ್ನು ಬೆರೆಸಿದಲ್ಲಿ ಚರ್ಮಕ್ಕೆ ಹೊಸ ಕಳೆ ಬರುತ್ತದೆ.
* ಉಸಿರಾಟ, ಗಂಟಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುವವರು ಬಿಸಿ ನೀರು ಕುಡಿಯಬೇಕು. ಆಗ ಇನ್ಫೆಕ್ಷನ್ ದೂರವಾಗುತ್ತದೆ. ಋತುಚಕ್ರ ಕ್ರಿಯೆಯಲ್ಲಿ ತೊಂದರೆ, ಹೊಟ್ಟೆ ನೋವು, ಸೊಂಟ ನೋವು ಬಾಧಿಸುತ್ತಿದ್ದಾಗ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಸಮಸ್ಯೆ ಇಳಿಮುಖವಾಗುತ್ತದೆ. ಮುಂಜಾನೆ ಸಮಯದಲ್ಲಿ ಸೇವನೆ ಮಾಡುವುದರಿಂದ ಜೈವಿಕ ಕ್ರಿಯೆಗಳಲ್ಲಿ ವೃದ್ಧಿ ಉಂಟಾಗುತ್ತದೆ. ಅದೇ ರೀತಿ ರಾತ್ರಿ ಮಲಗುವ ಮುನ್ನ ಕುಡಿದರೆ ಹಾಯಾಗಿ ನಿದ್ರೆ ಬರುತ್ತದೆ.