ಪೆಟ್ರೋಲ್ ಬೆಲೆಯು ಲೀಟರ್‌ಗೆ 100 ರೂ. ದಾಟಿ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರ್ಯಾಯವಾಗಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆ ಕೂಡ ಮಹಾನಗರಗಳಲ್ಲಿ ನಿಧಾನವಾಗಿ ಹೆಚ್ಚುತ್ತಿದೆ.
ತಿಂಗಳ ಕರೆಂಟ್ ಬಿಲ್ ಮೊತ್ತದಲ್ಲಿ 200 ರೂ. ಹೆಚ್ಚಿಗೆ ಕಟ್ಟಿದರೂ ಚಿಂತೆಯಿಲ್ಲ, ತಿಂಗಳಿಗೆ 2 ರಿಂದ 3 ಸಾವಿರ ರೂ.ಗಳನ್ನು ಪೆಟ್ರೋಲ್‌ಗೆ ಸುರಿಯಲಾರೆ ಎನ್ನುವುದು ಮಧ್ಯಮ ವರ್ಗದ ದ್ವಿಚಕ್ರ ವಾಹನ ಸವಾರರ ವಾಸ್ತವ ಮನಸ್ಥಿತಿ.
ಇದನ್ನು ಚೆನ್ನಾಗಿ ಅರಿತುಕೊಂಡ ಅನೇಕ ದೇಶೀಯ ಎಲೆಕ್ಟ್ರಿಕ್ ವಾಹನ ತಯಾರಕರು ಹೊಸ ದ್ವಿಚಕ್ರ ಸ್ಕೂಟರ್‌ಗಳು, ಬೈಕ್‌ಗಳನ್ನು ಸಾಲುಸಾಲಾಗಿ ಮಾರುಕಟ್ಟೆಗೆ ಬಿಡುತ್ತಲೇ ಇದ್ದಾರೆ.
ವಾರ್ಡ್‌ವಿಜಾರ್ಡ್ ಇನ್ನೋವೆಷನ್ಸ್ ಮತ್ತು ಮೊಬಿಲಿಟಿ ಕಂಪನಿಯು ಈ ಸಾಲಿಗೆ ಸೇರ್ಪಡೆಯಾಗಿದೆ. ಎರಡು ಹೊಸ ದೇಶೀಯ ತಯಾರಿಕೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈ ತಿಂಗಳೇ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಜನವರಿ 10 ರಿಂದ 12ನೇ ತಾರೀಖು ಗುಜರಾತಿನ ಜಾಗತಿಕ ಶೃಂಗದಲ್ಲಿ ಈ ಸ್ಕೂಟರ್‌ಗಳ ಚೊಚ್ಚಲ ಪ್ರದರ್ಶನ ನಡೆಯಲಿದೆ.
ಸೇನಾ ಕ್ಯಾಂಟೀನ್ ನಲ್ಲಿ ಭಾರತೀಯ ವಸ್ತುಗಳಷ್ಟೇ ಮಾರಾಟ: ಇನ್ನೂ ತೀರ್ಮಾನವಾಗಿಲ್ಲವೆಂದ ಕೇಂದ್ರ ಸರ್ಕಾರ
’ವುಲ್ಫ್+’ ಮತ್ತು ’ನೆಕ್ಸ್ಟ್ ಜೆನ್ +’ ಎಂಬ ಹೆಸರಿನ ಸ್ಕೂಟರ್‌ಗಳು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇವರೆಡೂ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ವೇಗ ಸಾಲದು ಎಂಬ ಆರೋಪವನ್ನು ದೂರ ಮಾಡಲಿವೆ ಎಂದು ಕಂಪನಿಯು ವಿಶ್ವಾಸ ಹೊಂದಿದೆ.