ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್ ಪಡೆದಿರುವ ಫಜಲ್ ಸುಲ್ತಾನ್ ಅಟ್ರಾಚಲಿ ಒಂದು ಕಡೆಯಾದರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಪಡೆದಿರುವ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್, ಈ ಇಬ್ಬರ ಕಾಳಗಕ್ಕೆ ಚೆನ್ನೈ ಕ್ರೀಡಾಂಗಣ ಸಜ್ಜಾಗಿದೆ. ನಂಬರ್ ಒನ್ ಆಟಗಾರರ ನಡುವೆ ಇಂದು ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ಯುಪಿ ಯೋದಾಸ್ ಹಾಗೂ ಗುಜರಾತ್ ಜೈಂಟ್ಸ್ ಗೆ ಈ ಪಂದ್ಯ ತುಂಬಾ ಮುಖ್ಯವಾಗಿದ್ದು. ಅಂಕಪಟ್ಟಿಯಲ್ಲಿ ಮೇಲೆ ಬರುವುದನ್ನು ನೋಡುತ್ತಿದ್ದಾರೆ.
ಇಂದು ಪ್ರೊ ಕಬಡ್ಡಿ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ. ನಿನ್ನೆಯ ಪಂದ್ಯದಲ್ಲಿ ತಮಿಳ್ ತಲೈವಾಸ್ ತನ್ನ ಓಂ ಗ್ರೌಂಡ್ ನಲ್ಲಿ ಸೋಲು ಕಂಡಿದ್ದು, ಇಂದು ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ.