ರಷ್ಯಾವು ಉಕ್ರೇನ್ ಮೇಲೆ ಭೂ, ನೌಕಾ ಹಾಗೂ ವಾಯುಸೇನೆ ಮೂಲಕ ಪೂರ್ಣ ಪ್ರಮಾಣದ ಆಕ್ರಮಣ ನಡೆಸುತ್ತಿದೆ. ಉಕ್ರೇನ್ ಗಡಿಯೊಳಗೆ ಈಗಾಗಲೇ ನೆಲೆಗೊಂಡು, ಮೂರು ಕಡೆಯಿಂದ ದಾಳಿ ಮಾಡುತ್ತಿದೆ.
ಉಕ್ರೇನಿಯನ್ ಪ್ರಜೆಗಳು ತಮ್ಮ ಜೀವ ಉಳಿಸಿಕೊಳ್ಳಲು ಪಶ್ಚಿಮಕ್ಕೆ ಓಡುತ್ತಿದ್ದು ಆಶ್ರಯ ಹುಡುಕುತ್ತಿದ್ದಾರೆ.
ಏತನ್ಮಧ್ಯೆ, ಮಾಧ್ಯಮವೊಂದು ಬೇಸರ ತರಿಸುವ ವಿಡಿಯೋ ಬಿಡುಗಡೆ ಮಾಡಿದೆ. ವೈದ್ಯರು ಮತ್ತು ನರ್ಸ್ ಸಣ್ಣ ಸಣ್ಣ ಶಿಶುಗಳನ್ನು ತೊಟ್ಟಿಲಿಗೆ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಯುವತಿಯ ವಯೋಲಿನ್‌ನಲ್ಲಿ ಹಾರ್ಡಿ ಸಂಧುವಿನ “ಬಿಜ್ಲೀ ಬಿಜ್ಲೀಯ”: ಮನಸೋತ ನೆಟ್ಟಿಗರು
ಪೂರ್ವ ಉಕ್ರೇನ್‌ನ ಡಿನಿಪ್ರೊ ನಗರದಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದೆ, ಮೇಕ್ ಶಿಫ್ಟ್ ಬಾಂಬ್ ಶೆಲ್ಟರ್ ನಲ್ಲಿ ಶಿಶುಗಳಿಗೆ ಆಶ್ರಯ ನೀಡಲಾಗುತ್ತಿದೆ. ನೆಲಮಾಳಿಗೆಯ ಸ್ಟೋರ್ ರೂಂ ತಾತ್ಕಾಲಿಕವಾಗಿ ಶಿಶು ಆಶ್ರಯವಾಗಿ ಮಾರ್ಪಟ್ಟಿದೆ.
ವೀಡಿಯೊದಲ್ಲಿ ಕೆಲವೇ ಗಂಟೆಗಳಲ್ಲಿ ಹುಟ್ಟಿರುವ ಶಿಶುಗಳು ಹಾಸಿಗೆ ಮೇಲೆ ವೈದ್ಯಕೀಯ ಉಪಕರಣಗಳೊಂದಿಗೆ ಸಂಪರ್ಕಗೊಂಡಿರುವುದನ್ನು ಕಾಣಬಹುದು. ಉಸಿರಾಟದ ತೊಂದರೆ ಎದುರಿಸುತ್ತಿದ್ದರಿಂದ ಅಮ್ಲಜನಕ ಸರಬರಾಜು ಮಾಡುತ್ತಿರುವುದು ಸಹ ಕಂಡುಬಂದಿದೆ.
ಡಾ. ಡೆನಿಸ್ ಸುರ್ಕೋವ್ ಅವರು ಆಸ್ಪತ್ರೆಯೊಂದರ ನವಜಾತ ಘಟಕದ ಮುಖ್ಯಸ್ಥರಾಗಿದ್ದು, ಬಾಂಬ್ ದಾಳಿಯಿಂದ ರಕ್ಷಿಸಿಕೊಳ್ಳಲು ಇದು
ನಿಯೋನಾಟಲ್ ಇಂಟೆನ್ಸಿವ್ಆರೈಕೆ ಘಟಕ. ತನ್ನಿಂದ ಕಲ್ಪಿಸಿಕೊಳ್ಳಲು ಸಾಧ್ಯವೇ? ಇದು ವಾಸ್ತವ ಎಂದು ಪರಿಸ್ಥಿತಿಯ ಗಂಭೀರತೆ ಎತ್ತಿ ತೋರಿಸಿದ್ದಾರೆ.