ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ.
ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು ನಿಗದಿಪಡಿಸಿದ್ದರು. ಆದರೆ ರಷ್ಯಾ ಉಕ್ರೇನ್ ಗಡಿ ತಲುಪುತ್ತಿದ್ದಂತೆ ಇವರಿಬ್ಬರು ಕೀವ್‌ನ ಸೇಂಟ್ ಮೈಕೆಲ್ ಮಾಂಟೆಸರಿಯಲ್ಲಿ ಮದುವೆಯಾಗಲು ನಿರ್ಧರಿಸಿದರು.
ನಮ್ಮ ಭೂಮಿಗಾಗಿ ಹೋರಾಟ ನಡೆಸಲಿದ್ದೇವೆ. ನಾವು ಬಹುಶಃ ಸಾಯಬಹುದು. ಮತ್ತು, ನಾವು ಒಟ್ಟಿಗೆ ಇರಲು ಬಯಸಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅರಿವಾ ಪತಿ ಸ್ಥಳೀಯ ಟೆರಿಟೋರಿಯಲ್ ರಕ್ಷಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಾರೆ.
ರೆಸ್ಟೋರೆಂಟ್‌ನ ಕ್ಯೂಟ್ ಆದ ಟೆರೆಸ್‌ನಲ್ಲಿ ಮುದ್ದಾದ ಜೋಡಿಯ ವಿವಾಹದ ಫೋಟೋ ಈಗ ಸುದ್ದಿಯಾಗಿದೆ. ಆತಂಕದ ಸಮಯದಲ್ಲಿ ನಡೆದ ವಿವಾಹ, ಅವರ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
https://www.facebook.com/permalink.php?story_fbid=1988500981322806&id=100004887704913