ಕೀವ್: ಉಕ್ರೇನ್ ವಿರುದ್ಧ ನಿರಂತರ ನಾಲ್ಕನೇ ದಿನವೂ ಯುದ್ಧ ಮುಂದುವರೆಸಿರುವ ರಷ್ಯಾ, ರಾಜಧಾನಿ ಕೀವ್ ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ನಡುವೆ ರಷ್ಯಾ ಮಿಲಿಟರಿ ಪಡೆಗಳು ಶೆಲ್ ದಾಳಿ ನಡೆಸಿದ್ದು, ಬಾಲಕಿ ಸೇರಿ 6 ನಾಗರಿಕರು ಬಲಿಯಾಗಿದ್ದಾರೆ.
ಉಕ್ರೇನ್ ನ ಓಖ್ಟಿರ್ಕಾದಲ್ಲಿ ರಷ್ಯಾ ಸೇನೆ ಭೀಕರ ಶೆಲ್ ದಾಳಿ ನಡೆಸುತ್ತಿದ್ದು, 7 ವರ್ಷದ ಬಾಲಕಿ ಸೇರಿದಂತೆ 6 ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಗವರ್ನರ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಸೇನೆ ದಾರಿ ತಪ್ಪಿಸಿದ ಉಕ್ರೇನ್ ರಸ್ತೆ ನಿರ್ವಹಣೆ ಕಂಪನಿ; ಮಾರ್ಗ ಸಂಕೇತ, ಬೋರ್ಡ್ ಗಳನ್ನು ತೆಗೆದು ಹಾಕಿ ಹೋರಾಟ
ಓಖ್ಟಿರ್ಕಾ ಪ್ರದೇಶ ರಾಜಧಾನಿ ಕೀವ್ ನಿಂದ 345 ಕಿ.ಮೀ ದೂರದಲ್ಲಿದ್ದು, ಈ ಪ್ರದೇಶದಲ್ಲಿ ಭಾರಿ ಶೆಲ್ ದಾಳಿ ನಡೆಯುತ್ತಿದೆ ಎಂದು ಗವರ್ನರ್ ದೃಢಪಡಿಸಿದ್ದಾರೆ. ಇನ್ನೊಂದೆಡೆ ಕೀವ್ ಸಿಟಿ ಸಂಪೂರ್ಣ ರಣಾಂಗಣವಾಗಿದ್ದು, ಎಲ್ಲಿ ನೋಡಿದರಲ್ಲಿ ಬೆಂಕಿ, ಬಾಂಬ್ ದಾಳಿ, ಗುಂಡಿನ ಮೊರೆತಗಳು ಕೇಳಿಬರುತ್ತಿವೆ. ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಅಲ್ಲಿರುವ ಜನರ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ.