ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕೀವ್, ಖಾರ್ಕಿವ್ ಸೇರಿದಂತೆ ಉಕ್ರೇನ್ ನ ಹಲವು ಪ್ರದೇಶಗಳಲ್ಲಿ ರಷ್ಯಾ ತನ್ನ ಸೇನಾ ಸಂಖ್ಯೆಯನ್ನು ಹೆಚ್ಚಿಸಿದೆ. ಈ ನಡುವೆ ವಿಶ್ವದ ದೊಡ್ಡಣ್ಣ ಅಮೆರಿಕ, ರಷ್ಯಾಗೆ ಖಡಕ್ ಎಚ್ಚರಿಕೆ ನೀಡಿದೆ.
ಈಗಾಗಲೇ ಉಕ್ರೇನ್ ಗೆ ಆರ್ಥಿಕ ನೆರವು ಘೋಷಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಸೂಚಿಸಿದ್ದಾರೆ. ಒಂದೊಮ್ಮೆ ನ್ಯಾಟೋ ರಾಷ್ಟ್ರಗಳಿಗೆ ಕಾಲಿಟ್ಟರೆ ಅಮೆರಿಕ ಮಧ್ಯಪ್ರವೇಶ ಮಾಡಿ, ಯುದ್ಧದ ಮೂಲಕ ರಷ್ಯಾ ಸೊಕ್ಕು ಮುರಿಯಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ವಸತಿ ರಹಿತ ಮಹಿಳೆಗೆ ಉದ್ಯೋಗ, ಲ್ಯಾಪ್ ಟಾಪ್ ಕರುಣಿಸಿದ ಅಪರಿಚಿತೆ
ರಷ್ಯಾ ನಮ್ಮ ಮುಂದೆ ಎರಡು ಆಯ್ಕೆಗಳನ್ನು ಮುಂದಿಟ್ಟಿದೆ. ಒಂದು ರಷ್ಯಾ ವಿರುದ್ಧ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸುವುದು, 2ನೇ ಆಯ್ಕೆ ಮೂರನೇ ಮಹಾಯುದ್ಧ ಆರಂಭಿಸುವುದು. ಯುದ್ಧದಿಂದಲೇ ರಷ್ಯಾಗೆ ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಮೆರಿಕ ಉಕ್ರೇನ್ ಗೆ ಮಾನವೀಯ ನೆರವು ನೀಡಲಿದೆ ಎಂದು ತಿಳಿಸಿರುವ ಜೋ ಬೈಡನ್ ಈಗಾಗಲೇ 600 ಮಿಲಿಯನ್ ಯು ಎಸ್ ಡಾಲರ್ ನೆರವು ಘೋಷಿಸಿದ್ದಾರೆ.